ನಂದಿಬೆಟ್ಟಕ್ಕೆ ರೋಪ್ ವೇ ಯೋಜನೆಯ ಭಾಗವಾಗಿ ನಂದಿ ಬೆಟ್ಟದ ಬುಡದಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡುಲಾಗುತ್ತಿದೆ, ಇದಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ರೈತರ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಹೈಕೋರ್ಟ್ ಮೊರೆ ಹೋದ ರೈತ ಮುನಿನಾರಾಯಣಪ್ಪ ಪಾರ್ಕಿಂಗ್ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ರೈತ ಮುನಿನಾರಾಯಣಪ್ಪ ಸುಮಾರು 20 ವರ್ಷಗಳಿಂದ ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ, 1998ರಲ್ಲಿ ಬಗರ್ ಹುಕ್ಕುಂ ಸಾಗುವಳಿ ಅಡಿ 53 ಅರ್ಜಿಯನ್ನ ಸಲ್ಲಿಸಿದ್ದಾರೆ, ಕಂದಾಯ ಇಲಾಖೆ 1997-98ನೇ ಸಾಲಿನಲ್ಲಿ ಸರ್ವೆ ನಂಬರ್ 64ರಲ್ಲಿ 1.5 ಎಕರೆ ಭೂಮಿಯನ್ನು ಸ್ಕೆಚ್ ಕೂಡ ಮಾಡಿದ್ದಾರೆ. ಅಂದಿನ ಶಾಸಕ ಪಿಳ್ಳಮುನಿಶಾಮಪ್ಪ ಸಹ ಹಕ್ಕು ಪತ್ರ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಏಕಾಏಕಿ ರೈತ ಮುನಿನಾರಾಯಣಪ್ಪ ಜಮೀನು ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ, ನಂದಿಬೆಟ್ಟದ ರೋಪ್ ವೇ ನಿರ್ಮಾಣ ಭಾಗದ ಪಾರ್ಕಿಂಗ್ ನಿರ್ಮಿಸಲು 3.20 ಎಕರೆ ರೈತರ ಜಾಗವನ್ನ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ ಮತ್ತು ಪಾರ್ಕಿಂಗ್ ಕಾಮಾಗಾರಿ ಸಹ ನಡೆಯುತ್ತಿದೆ. ಜಮೀನು ಒತ್ತುವರಿ ವಿರುದ್ಧ ರೈತ ಮುನಿನಾರಾಯಣಪ್ಪ ಹೈಕಮಾಂಡ್ ನಲ್ಲಿ ಅರ್ಜಿ ಸಲ್ಲಿಸಿದ್ದರು, ರೈತನ ಮನವಿ ಅಲಿಸಿದ ಸರ್ಕಾರ ಪಾರ್ಕಿಂಗ್ ನಿರ್ಮಾಣಕ್ಕೆ ಹೈ ಕೋರ್ಟ್ ತಡೆಯಾಜ್ಙೆ ನೀಡಿದೆ, ತಡೆಯಾಜ್ಞೆ ಆದೇಶ ಕಾಪಿಯನ್ನ ಅಧಿಕಾರಿಗಳ ಗಮನಕ್ಕೂ ತಂದರು ಕೋಟ್ ಆದೇಶವನ್ನು ಉಲ್ಲಂಘನೆ ಮಾಡಿ ಪಾರ್ಕಿಂಗ್ ಕಾಮಾಗಾರಿ ಮಾಡುತ್ತಿದ್ದಾರೆಂಬುದ್ದಿ ಮುನಿನಾರಾಯಣಪ್ಪನವರ ಆರೋಪವಾಗಿದೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ನಂದಿಬೆಟ್ಟಕ್ಕೆ ರೋಪ್ ವೇಯೋಜನೆಯ ಪಾರ್ಕಿಂಗ್ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ ಗ್ರಾಮದಲ್ಲಿ 9.30 ಎಕರೆ ಭೂಮಿಯನ್ನು ಮೀಸಲಿಟ್ಟಿತ್ತು. ಆದರೆ ಇಂದಿನ ಬಿಜೆಪಿ ಸರ್ಕಾರ ರೋಪ್ ವೇ ಯೋಜನೆಯನ್ನ ಪೂರ್ವದಿಂದ ಪಶ್ಚಿಮಕ್ಕೆ ಬದಲಾಯಿಸಿದೆ, ಇದರಿಂದ ರೈತ ಮುನಿನಾರಾಯಣಪ್ಪ 1.20 ಎಕರೆ ಹಾಗೂ ಚೆಲುವ ಮೂರ್ತಿಯ 2 ಎಕರೆ ಸೇರಿದಂತೆ
ಒಟ್ಟು 3.20 ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ, ಜೀವನಕ್ಕೆ ಇರುವ ಏಕೈಕ ಜಮೀನು ಉಳಿಸಿ ಕೊಳ್ಳಲು ರೈತ ಹೈಕೋರ್ಟ್ ಮೊರೆ ಹೋಗಿದ್ದು, ರೈತನ ಮನವಿಗೆ ಸ್ಪಂದಿಸಿದ ಕೋರ್ಟ್ ಪಾರ್ಕಿಂಗ್ ಕೆಲಸ ನಿಲ್ಲಿಸುವಂತೆ ತಡೆಯಾಜ್ಞೆ ಆದೇಶ ನೀಡಿದೆ.
PublicNext
26/02/2022 11:52 am