ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಶುರುವಾಗಿದೆ. ನಗರದಾದ್ಯಂತ ಇಂದು ವರುಣನ ಅರ್ಭಟ ಜೋರಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಈಗ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬೆಂಗಳೂರಿನಲ್ಲಿ ಕೆಲವು ಕಡೆಗಳಲ್ಲಿ ಆಗಾಗ ತುಂತುರು ಮಳೆ ದಾಖಲಾಗಿದೆ. ಇಡಿ ದಿನ ಮೋಡ ಕವಿದ ಹಾಗೂ ಚಳಿಯ ವಾತಾವರಣ ಕಂಡು ಬಂದಿದೆ. ಹಿಂಗಾರು ಆರಂಭದ ಸೂಚನೆ ಎಂಬಂತೆ ತಂಪು ಗಾಳಿ ವಿಸ್ತರಿಸುತ್ತಿದೆ. ಕೆಂಗೇರಿ, ಯಶವಂತಪುರ, ಜಯನಗರ, ಬನಶಂಕರಿ, ಗಾಂಧಿ ಬಜಾರ್ ಅಧಿಕ ಮಳೆಯಾಗಿದ್ದು, ವಿಜಯನಗರ, ಹಲವೆಡೆ ಮಳೆಯಾಗುತ್ತಿದೆ. ಇನ್ನೂ 2-3 ಗಂಟೆಗಳ ಕಾಲ ಮಾಳೆ ಜೊರಾದ ಮಳೆಯಾಗುತ್ತದೆ.
PublicNext
13/10/2022 06:27 pm