ನೆಲಮಂಗಲ: ಇತ್ತೀಚೆಗೆ ಸುರಿದ ಧಾರಕಾರ ಮಳೆಯಿಂದ ತಾಲ್ಲೂಕಿನ ಕೆರೆ ಕಟ್ಟೆ ತುಂಬಿ ಹರಿಯುತ್ತಿವೆ. ಅದೇ ರೀತಿ ಗ್ರಾಮವೊಂದರ ಕೆರೆ ಕೋಡಿ ಹರಿದ ಪರಿಣಾಮ ಗ್ರಾಮದ ಸಂಪರ್ಕ ಕಡಿತಗೊಂಡಿದೆ.
ಸದ್ಯ ಸಮರ್ಪಕ ರಸ್ತೆ ಇಲ್ಲದೆ ಶಾಲಾ ಮಕ್ಕಳು, ರೈತರು ಮತ್ತು ಗ್ರಾಮಸ್ಥರು ಕಂಗಾಲಾಗಿರೋ ದೃಶ್ಯ ಕಂಡು ಬಂದಿದ್ದು, ನೆಲಮಂಗಲ ತಾಲೂಕಿನ ಗಡಿ ಗ್ರಾಮ ಬರಗೂರು ಕಾಲೋನಿಯಲ್ಲಿ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ತುಂಬಿ ಹರಿದ ಬರಗೂರು ಕೆರೆ ಕೋಡಿಯಾಗಿ ಬರಗೂರು ಹಾಗೂ ಬರಗೂರು ಕಾಲೋನಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಕೋಡಿ ಹರಿಯುತ್ತಿರೋ ನೀರಿನ ರಭಸಕ್ಕೆ ಗ್ರಾಮಗಳ ನಡುವಿನ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ.
ಇದ್ರಿಂದ ಗ್ರಾಮದ ಸಂಪರ್ಕ ರಸ್ತೆ ಕೊಚ್ಚಿ ಹೋದ ಹಿನ್ನೆಲೆ ಗ್ರಾಮಸ್ಥರು ಓಡಾಡಲು ಮತ್ತು ಮಕ್ಕಳು ಶಾಲೆಗೆ ಹೋಗಲು ಮತ್ತು ಬರಲು ಪರದಾಡುತ್ತಿದ್ದಾರೆ. ಹೀಗಾಗಿ ಶೀಘ್ರವಾಗಿ ರಸ್ತೆ ರಿಪೇರಿ ಮಾಡಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
PublicNext
12/09/2022 07:58 am