ಬೆಂಗಳೂರು: ಕಣ್ಣು ಹಾಯಿಸಿದ ಕಡೆಯೆಲ್ಲಾ ಬರೀ ನೀರು ನೀರು.. ಹೌದು ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರೆ ನಡುಗಿ ಹೋಗಿತ್ತು ಅದರಂತೆ ಬೆಳಂದೂರು ಏರಿಯಾ ಕೂಡ ಮಳೆಯ ರುದ್ರನರ್ತನಕ್ಕೆ ಸಂಪೂರ್ಣ ಏರಿಯಾಗಳು ಮುಳುಗಿ ಹೋಗಿದೆ. ಬೆಳ್ಳಂದೂರು ಔಟೆರ್‌ರಿಂಗ್ ರೋಡ್ ರಸ್ತೆಯಲ್ಲಿ ರಾಜಕಾಲುವೆ ಉಕ್ಕಿಹರಿದು ರಸ್ತೆಯ ಮೇಲೆ ನದಿಯಂತೆ ನೀರು ಹರಿದುಬರುತ್ತಿದೆ.
ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ ಎರಡು ದಿನಗಳು ಕಳೆದರು ಕೂಡ ನೀರು ಹರಿಯುವ ಪ್ರಮಾಣ ಕಮ್ಮಿ ಆಗಿಲ್ಲ. ರಸ್ತೆ ಮೇಲೆ ಯಾವುದೋ ನದಿ ಹರಿದು ಬರುತ್ತಿರುವ ದೃಶ್ಯ ಕಂಡು ಬರುತ್ತಿದೆ ಇನ್ನೊಂದು ಕಡೆ ಸಂಚಾರಿ ಪೊಲೀಸರು ಔಟರ್‌ರಿಂಗ್ ರೋಡ್‌ಗೆ ಬರುವಂತಹ ವಾಹನಗಳನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಡೈವರ್ಟ್ ಮಾಡಲಾಗುತ್ತಿದೆ. ನಮ್ಮ ಪ್ರತಿನಿಧಿ ನವೀನ ನೀಡಿರುವ ಗ್ರೌಂಡ್ ರಿಪೋರ್ಟ್ ವರದಿ ಇಲ್ಲಿದೆ.
PublicNext
06/09/2022 06:02 pm