ದೊಡ್ಡಬಳ್ಳಾಪುರ : ಭಾರಿ ಮಳೆಯಿಂದ ಕೊಟ್ಟಿಗೆಮಾಚೇನಹಳ್ಳಿ- ಹೊಸಹಳ್ಳಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ರಭಸವಾಗಿ ಹರಿಯುತ್ತಿರುವ ನೀರಿನ ಕಾಲುವೆಯಲ್ಲಿ ಜೀವದ ಹಂಗು ತೊರೆದು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗ್ರಾಮಸ್ಥರು ಹಳ್ಳ ದಾಟುತ್ತಿದ್ದಾರೆ.
2017 ರಲ್ಲಿ ಸುರಿದ ಮಳೆಗೆ ಕೊಟ್ಟಿಗೆಮಾಚೇನಹಳ್ಳಿ-ಹೊಸಹಳ್ಳಿ ಸಂಪರ್ಕ ಸೇತುವೆ ಕೊಚ್ಚಿಹೋಗಿದೆ, ಈ ಸೇತುವೆ ಕೊಟ್ಟಿಗೆಮಾಚೇನಹಳ್ಳಿ, ಕುಕ್ಕಲಹಳ್ಳಿ, ಬ್ಯಾಡರಹಳ್ಳಿಯ ಸಾವಿರಾರು ಜನರಿಗೆ ಈ ಸೇತುವೆ ಸಂಪರ್ಕ ಸೇತುವೆಯಾಗಿತ್ತು, ಗ್ರಾಮಸ್ಥರ ಓಡಾಟಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಪ್ರತಿ ಭಾರಿ ಮಳೆಯಾದಗಲೂ ತಾತ್ಕಾಲಿಕ ಸೇತುವೆ ಸಹ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.
ಸದ್ಯ 75 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಾಗಾರಿ ನಡೆಯುತ್ತಿದೆ, ಮಳೆಗಾಲಕ್ಕೂ ಮುನ್ನ ಸೇತುವೆ ಕಾಮಾಗಾರಿ ಪೂರ್ಣವಾಗದೆ ಹಿನ್ನಲೆ ಜನರು ಜೀವದ ಹಂಗು ತೊರೆದು ಕಾಲುವೆ ದಾಟ ಬೇಕಿದೆ, ಹಗ್ಗದ ಸಹಾಯದಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗ್ರಾಮಸ್ಥರು ಕಾಲುವೆ ದಾಟುತ್ತಿದ್ದಾರೆ, ಹಾಲಿನ ಕ್ಯಾನ್ ಗಳನ್ನ ಸಹ ಇದೇ ಕಾಲುವೆ ದಾಟಿಕೊಂಡು ಸಾಗಿಸಲಾಗುತ್ತಿದೆ. ನೀರಿನ ರಭಸ ಕಡಿಮೆಯಾದಾಗ ಬೈಕ್ ಸವಾರರು ಹರಸಹಾಸ ಪಟ್ಟು ಕಾಲುವೆಯನ್ನ ದಾಟುತ್ತಿದ್ದಾರೆ.
PublicNext
06/09/2022 04:46 pm