ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯಾಚರಣೆ ಆರಂಭ

ಬೆಂಗಳೂರು: ಮಳೆಯ ಅವಾಂತರಕ್ಕೆ ಸರ್ಜಾಪುರ ರಸ್ತೆ ರೈನ್ಬೋ ಡ್ರೈವ್ ಲೇಔಟ್ ಲೇಔಟ್‌ನಲ್ಲಿ ತುಂಬಿದ್ದ ನೀರು ಎರಡು ದಿನಗಳಿಂದ ಇಳಿಮುಖ ಕಾಣುತ್ತಿಲ್ಲ. ಈ ಹಿನ್ನೆಲೆ ಸ್ಥಳಕ್ಕೆಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಲಾಗಿದೆ. ಪ್ರತಿ ಬಾರಿ ಸುರಿಯುತ್ತಿದ್ದ ಮಳೆಗೆ ತುಂಬಿ ಹೋಗುತ್ತಿದ್ದ ಲೇಔಟ್ ಒಂದು ಅಥವಾ ಎರಡು ದಿನಗಳಲ್ಲಿ ಲೇಔಟ್ ನಲ್ಲಿ ತುಂಬಿದ ನೀರು ಇಳಿಮುಖ ಕಾಣುತ್ತಿತ್ತು. ಆದರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಲೇಔಟ್ ಸಂಪೂರ್ಣವಾಗಿ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಇನ್ನು ಮಹದೇವಪುರ ವ್ಯಾಪ್ತಿಯ ಹಲವಾರು ಲೇಔಟ್‌ಗಳು ಮಳೆಯ ಅವಾಂತರಕ್ಕೆ ಮನೆಗಳಲ್ಲಿ ನೀರು ನುಗ್ಗಿ ಜನರು ಮನೆಯಿಂದ ಹೊರಬರಲು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಬೆಲ್ಲಂದೂರಿನ ಇಕೋ ಸ್ಪೇಸ್ ಟೆಕ್ ಪಾರ್ಕ್‌ನ ಒಳಗೆ ಕೂಡ ಭಾರಿ ಪ್ರಮಾಣದ ನೀರು ನುಗ್ಗಿ ಟೆಕ್ ಪಾರ್ಕ್ ಸಂಪೂರ್ಣ ಜಲದಿಗ್ಬಂಧನಕ್ಕೆ ಒಳಗಾಗಿದೆ. ಮತ್ತು ಔಟರ್ ರಿಂಗ್ ರೋಡ್ ಮುಖ್ಯರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

06/09/2022 04:06 pm

Cinque Terre

28.52 K

Cinque Terre

0

ಸಂಬಂಧಿತ ಸುದ್ದಿ