ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರಿನ ಜನ

ಬೆಂಗಳೂರು : ನಿನ್ನೆ ಸಂಜೆಯಿಂದ ರಾತ್ರಿಯವರೆಗೆ ಧಾರಕಾರವಾಗಿ ಸುರಿದ ಭಾರಿ ಮಳೆಗೆ ಕಾಂಕ್ರೆಟ್ ನಾಡಿನ ರಸ್ತೆಗಳು ನದಿಯಂತೆ ಆಗಿತ್ತು. ಸಂಜೆಯಿಂದ ಬಿಟ್ಟುಬಿಡದೆ ಸುರಿದ ಭಾರಿ ಮಳೆಗೆ ಬೆಂಗಳೂರಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದ್ದ ನೀರಿನಲ್ಲಿ ವಾಹನ ಸವಾರರು ಪರದಾಟ ನಡೆಸುವ ದೃಶ್ಯಗಳೇ ಕಂಡುಬಂತು.

ಅದರಲ್ಲೂ ದಕ್ಷಿಣ ಬೆಂಗಳೂರಿನ ಸ್ಪೈಸ್ ಗಾರ್ಡನ್ ಲೇಔಟ್ ರಸ್ತೆ ಜಲಾವೃತಗೊಂಡಿದ್ದು, ಮೋರಿ ನೀರು ಉಕ್ಕಿ ರಸ್ತೆ ಮೇಲೆ ಹರಿದಿದ್ದರಿಂದ ರಸ್ತೆ ಜಲಾವೃತಗೊಂಡು ವಾಹನಗಳು ನಿಂತಲ್ಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಬೆಂಗಳೂರಿನ ಹಲವಾರು ಏರಿಯಾಗಳಲ್ಲಿ ಕೂಡಾ ಮಳೆರಾಯ ಆರ್ಭಟ ತೋರಿದ್ದಾನೆ.. ಪ್ರತಿ ಬಾರಿ ಮಳೆ ಬಂದಾಗಲೂ ಕೂಡಾ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ಜಲಾವೃತ ಗೊಳ್ಳುತ್ತದೆ. ಇದೇ ರೀತಿ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಕೂಡ ರಸ್ತೆಗಳು ಜಲಾವೃತಗೊಂಡಿದೆ. ಅನುಗ್ರಹ ಲೇಔಟ್ ನಿವಾಸಿಗಳು ಮನೆಯಲ್ಲೇ ಇರುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಇನ್ನೊಂದು ಕಡೆ ಅಗ್ನಿಶಾಮಕದಳ ಸಿಬ್ಬಂದಿ ಮೋಟರು ಬಳಸಿ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗಣೇಶನ ಮೆರವಣಿಗೆಗೆ ಕೂಡ ಮಳೆರಾಯ ಅಡ್ಡಿಯಾಗಿದ್ದು, ಮಳೆಯಲ್ಲೇ ಜನರು ಗಣಪನ ವಿಸರ್ಜನೆಗೆ ಮುಂದಾಗಿ ಕುಣಿದು ಕುಪ್ಪಳಿಸಿದರು. ಬಿಟಿಎಂ ಲೇಔಟ್ ಎಚ್ಎಸ್ಆರ್ ಲೇಔಟ್ ಬೊಮ್ಮನಹಳ್ಳಿ ಜೆಪಿ ನಗರ ಮಡಿವಾಳ ಕೋರಮಂಗಲ ಶಾಂತಿನಗರ ಮತ್ತು ಹಲವಾರು ಏರಿಯಾಗಳಲ್ಲಿ ಭಾರಿ ಮಳೆ ಸುರಿದಿದೆ. ಹವಾಮಾನ ಇಲಾಖೆಯಿಂದ ಇನ್ನೂ ಮೂರು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

05/09/2022 12:29 pm

Cinque Terre

23.81 K

Cinque Terre

0

ಸಂಬಂಧಿತ ಸುದ್ದಿ