ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿನ ಕೋರಮಂಗಲದ ರಸ್ತೆಗಳು ನದಿಯಂತೆ ಆಗಿವೆ. ಬಿಲ್ಡಿಂಗ್ ನ ಬೇಸ್ಮೆಂಟ್ ಗಳಲ್ಲಿ ನೀರು ತುಂಬಿ ವಾಹನಗಳು ಮುಳುಗಿ ಹೋಗಿವೆ. ಅದರಲ್ಲೂ ನಿನ್ನೆ ಸಂಜೆಯಿಂದ ಸುರಿದಿರುವ ಭಾರೀ ಮಳೆಗೆ ರಾತ್ರಿಯಿಂದ ರಸ್ತೆಗಳು ನದಿಯಂತೆ ಮಾರ್ಪಟ್ಟಿವೆ. ವಾಹನಗಳು ನದಿಯ ರೀತಿ ಇರುವ ರಸ್ತೆಯ ಮೇಲೆ ಪರದಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ.
ಕೋರಮಂಗಲದಲ್ಲಿ ರಾಜಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸುತ್ತಿದ್ದಾರೆ. ಕೋರಮಂಗಲದ ಮಹಾರಾಜ ಲೇಔಟ್ ನಲ್ಲಿ ಬಿಲ್ಡಿಂಗ್ ನ ಬೇಸ್ಮೆಂಟ್ ಗಳಲ್ಲಿ ನೀರು ತುಂಬಿದೆ. ಬೇಸ್ಮೆಂಟ್ ಗಳಲ್ಲಿ ತುಂಬಿರುವ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿವಾಸಿಗಳು ನಿರತರಾಗಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
04/08/2022 06:50 pm