ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹನಿಯೂರಲ್ಲಿ ಹನಿ ಮಳೆಯಾದ್ರೂ ಮನೆಗಳಿಗೆ ನುಗ್ಗುತ್ತೆ ನೀರು

ಬೆಂಗಳೂರು: ನಕಾಶೆಯಲ್ಲಿ ಕಾಲುವೆ ಇಲ್ಲ ಎಂಬ ನೆಪದಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಮಳೆ ಬಂದ್ರೆ ಸಾಕು ನೀರು ನೇರವಾಗಿ ದಲಿತರ ಕಾಲೋನಿಗೆ ನುಗ್ಗುತ್ತೆ. ಮಳೆ ನೀರು ನಿಂತು ಮನೆ ನೆಲಕ್ಕುರುಳಿದೆ. ಮತ್ತು ಕೆಲವು ಮನೆಗಳು ಬೀಳುವ ಹಂತದಲ್ಲಿವೆ. ದವಸ-ಧಾನ್ಯ ನೀರು ಪಾಲಾಗಿದೆ. ದಲಿತ ಸಮುದಾಯದ ನೋವು ಕೇಳಲು ಹೃದಯವಂತ ಜನಪ್ರತಿನಿಧಿಗಳು ಇಲ್ಲದೆ ಇರೋದು ಇಲ್ಲಿನವರ ದುಸ್ಥಿತಿಗೆ ಕಾರಣವಾಗಿದೆ.

ಯಲಹಂಕ ತಾಲೂಕಿನ ಹನಿಯೂರು ಕಾಲೋನಿ ನಿವಾಸಿಗಳ ಪಾಲಿಗೆ ಮಳೆ ಶಾಪವಾಗಿದೆ. ಹನಿಯೂರಲ್ಲಿ ಹನಿ ಮಳೆಯಾದ್ರೆ ಸಾಕು ದಲಿತರ ಕಾಲೋನಿಗೆ ನೀರು ನುಗ್ಗುತ್ತೆ. ಮಳೆ ನೀರು ಹೊರ ಹಾಕಲು ಕುಟುಂಬದ ಸದಸ್ಯರು ಇಡೀ ರಾತ್ರಿ ಜಾಗರಣೆ ಮಾಡ್ತಾರೆ. ದನಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕಷ್ಟ ಪಡ್ತಾರೆ. ದವಸ-ಧಾನ್ಯ ನೀರು ಪಾಲಾಗಿದ್ದನ್ನು ಕಂಡು ಕಣ್ಣಿರು ಹಾಕ್ತಾರೆ. ಕಾಲೋನಿ ನಿವಾಸಿಗಳ ಕಣ್ಣಿರಿಗೆ ಕಾರಣವಾಗಿದ್ದು ಚರಂಡಿಯ ಅವ್ಯವಸ್ಥೆ.

ದಲಿತರ ಕಾಲೋನಿಯಿಂದ ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇದೆ. ಆದರೆ ನಕಾಶೆಯಲ್ಲಿ ಕಾಲುವೆ ಇಲ್ಲವೆಂಬ ಕಾರಣಕ್ಕೆ ರಾಮಕೃಷ್ಣಪ್ಪ ಮತ್ತು ಗೋಪಾಲ್ ಎಂಬುವರು ತಮ್ಮ ನಿವೇಶಗಳ ಮುಂದೆ ಚರಂಡಿ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಮಳೆನೀರು ಮುಂದೆ ಹರಿಯಲು ಸಾಧ್ಯವಾಗದೆ ಕಾಲೋನಿಯಲ್ಲಿ ಎರಡು ಅಡಿಯಷ್ಟು ಎತ್ತರ ಮಳೆ ನೀರು ನಿಲ್ಲುತ್ತೆ. ಇದರಿಂದ ಕಾಲೋನಿಯಲ್ಲಿರುವ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಕಾಲೋನಿಯ ಸ್ಥಿತಿ ಹೀಗಿದ್ರೆ, ಊರಿನ ಸ್ಥಿತಿ ಸಹ ಇದಕ್ಕೆ ಹೊರತಾಗಿಲ್ಲ. ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಮತ್ತು ಕಿರಿದಾದ ಚರಂಡಿಗಳು. ಕಾಲುವೆ ಜಾಗಗಳನ್ನ ಒತ್ತುವರಿ ಮಾಡಿಕೊಂಡು ಮರಗಳನ್ನ ಹಾಕಿರುವುದರಿಂದ ಮಳೆನೀರು ಕೆರೆಗೆ ಹರಿದು ಹೋಗಲು ಸಾಧ್ಯವಾಗದೆ ಊರಿಗೆ ನುಗ್ಗಿದೆ. ಶಾಂತಕುಮಾರ್ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಗೆ ಮಳೆ ನೀರು ನುಗ್ಗಿ ಜಾನುವಾರುಗಳ ಆರೋಗ್ಯಕ್ಕೆ ಕುತ್ತು ತಂದಿದೆ. ಕೋಳಿಗಳನ್ನ ಬಲಿ ತೆಗೆದುಕೊಂಡಿದೆ. ಪಶು ಆಹಾರವಾದ ಬೂಸ ಸಹ ನೀರು ಪಾಲಾಗಿದೆ.

ಕಳೆದ ಎರಡು ವರ್ಷದಿಂದ ಹನಿಯೂರು ಗ್ರಾಮಕ್ಕೆ ಮಳೆ ಶಾಪವಾಗಿದೆ. ಅಗಲವಾದ ಚರಂಡಿ ವ್ಯವಸ್ಥೆ ಮತ್ತು ಕಾಲುವೆಗಳ ಒತ್ತುವರಿ ತೆರವು ಮಾಡುವುದರಿಂದ ಗ್ರಾಮಸ್ಥರ ನೆಮ್ಮದಿಗೆ ಕಾರಣವಾಗ ಬಹುದು. ಆದರೆ ಇಲ್ಲಿನ ಗ್ರಾಮ ಪಂಚಾಯತ್ ಮಾತ್ರ ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲಿಗೆ ಬೇಜವಾಬ್ದಾರಿ ವರ್ತನೆ ತೋರಿಸುತ್ತಿದೆ.

Edited By : Manjunath H D
Kshetra Samachara

Kshetra Samachara

19/06/2022 10:34 am

Cinque Terre

7.44 K

Cinque Terre

0

ಸಂಬಂಧಿತ ಸುದ್ದಿ