ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಳೆಯಿಂದಾಗಿ ಗೋಡೆ ಕುಸಿತ, ಮನೆ ಜಖಂ

ಆನೇಕಲ್ : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪುನಗರದಲ್ಲಿ ಮನೆ ಗೋಡೆ ಕುಸಿದಿದೆ.

ಕುವೆಂಪು ನಗರದ ನಿವಾಸಿ ಮಂಜಮ್ಮ ಎಂಬುವರಿಗೆ ಸೇರಿದ ಮನೆ ಇದಾಗಿದೆ.ಹೌದು ಮಂಜಮ್ಮ ಹಾಗೂ ವೆಂಕಟೇಶಪ್ಪ ದಂಪತಿ ಈ ಮನೆಯಲ್ಲಿ 30 ವರ್ಷಗಳಿಂದ ವಾಸವಾಗಿದ್ದು ನಿನ್ನೆ ಸಂಬಂಧಿಕರ ಊರಿಗೆ ತೆರಳಿದರು.

ಮನೆಗೆ ಇಂದು ವಾಪಸಾದಾಗ ಮನೆ ಗೋಡೆ ಕುಸಿದು ಬಿದ್ದಿದೆ.. ಇನ್ನು ಅವರಿಗೆ ಯಾರು ಆಶ್ರಯ ಇಲ್ಲದ ಕಾರಣಕ್ಕೆ ಮನೆಯನ್ನು ನಿರ್ಮಾಣ ಮಾಡಿಕೊಡುವಂತೆ ಸಹಾಯಾಸ್ತ ಚಾಚಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಮತ್ತು ಊರಿನ ಗ್ರಾಮಸ್ಥರಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಅಲ್ಲಿನ ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರ ಗಮನಕ್ಕೆ ತರಲಾಗಿದೆ.

Edited By : Shivu K
Kshetra Samachara

Kshetra Samachara

18/05/2022 10:14 pm

Cinque Terre

4.42 K

Cinque Terre

0

ಸಂಬಂಧಿತ ಸುದ್ದಿ