ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: HSR ಲೇಔಟ್ ಸ್ಟೇಡಿಯಂನಿಂದ ಪಬ್ಲಿಕ್ ನೆಕ್ಸ್ಟ್ ಗ್ರೌಂಡ್ ರಿಪೋರ್ಟ್ !

ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರಿನಾದ್ಯಂತ ಎಲ್ಲಾ ಕಡೆ ಮರ ಬಿದ್ದು ಅವಾಂತರಗಳು ಆಗಿತ್ತು. ಆದರೆ ಇಲ್ಲೊಂದು ಕಡೆ ಮರಗಳೇ ಭಾರಿ ದುರಂತವನ್ನು ತಪ್ಪಿಸಿದೆ.

ಸಂಜೆ ಸುರಿದ ಬಿರುಗಾಳಿ ಮತ್ತು ಮಳೆಗೆ ಎಚ್ಎಸ್ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಆಟದ ಕ್ರೀಡಾಂಗಣದ ಗ್ಯಾಲರಿಯ ಮೇಲ್ಛಾವಣಿ ಮುರಿದು ಬಿದ್ದಿತ್ತು.ಇದೇ ವರ್ಷದ ಮಾರ್ಚ್‌ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಈ ಸ್ಟೇಡಿಯಂ ಅನ್ನು ಉದ್ಘಾಟಿಸಲಾಗಿತ್ತು.

ಆದರೆ ಸುರಿದ ಬಿರುಗಾಳಿಗೆ ಸ್ಟೇಡಿಯಂನ ಮೇಲ್ಛಾವಣಿ ಕುಸಿದುಬಿದ್ದಿತ್ತು. ಕಳಪೆ ಕಾಮಗಾರಿ ನಿನ್ನೆ ನಡೆದ ಅನಾಹುತಕ್ಕೆ ಮುಖ್ಯ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಎಚ್ಎಸ್ಆರ್ ಲೇಔಟ್ ಸ್ಟೇಡಿಯಂನಿಂದ ನಮ್ಮ ಪ್ರತಿನಿಧಿ ನವೀನ್ ಮಾಡಿರುವಂತಹ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಒಟ್ನಲ್ಲಿ ಸ್ಟೇಡಿಯಂನ ಹಿಂಬದಿಯಲ್ಲೇ ಇದ್ದಂತಹ ಮರಗಳಿಂದ ನಿನ್ನೆ ಸಂಭವಿಸಬೇಕಾಗಿದ್ದ ಭಾರೀ ದುರಂತ ತಪ್ಪಿದೆ.ಆದರೆ, ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕಿದೆ.

-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
PublicNext

PublicNext

09/05/2022 09:02 pm

Cinque Terre

34.68 K

Cinque Terre

1

ಸಂಬಂಧಿತ ಸುದ್ದಿ