ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ತುಂಬೆಲ್ಲ ಎಲೆ-ಕೊಂಬೆ ರಾಶಿ!; ಸ್ವಚ್ಛತೆಯತ್ತ ಬಿಬಿಎಂಪಿ ನಿರ್ಲಕ್ಷ್ಯ

ಬೆಂಗಳೂರು: ಮಳೆ ಬಂದು ಮೂರು ದಿನಗಳು ಕಳೆದರೂ ಬಿಬಿಎಂಪಿ ಇನ್ನೂ ರಸ್ತೆಗಳ ಮೇಲೆ ಬಿದ್ದಿರುವ ಮರದ ಎಲೆಗಳು ಮತ್ತು ಕೊಂಬೆ- ರೆಂಬೆಗಳನ್ನು ತೆಗೆದು ಕ್ಲೀನ್ ಮಾಡುವ ಗೋಜಿಗೆ ಹೋಗಿಲ್ಲ! ಭಾನುವಾರ ಸಂಜೆ ಸುರಿದ ಭಾರೀ ಮಳೆ, ಜೋರು ಗಾಳಿಗೆ ನಗರದ ರಸ್ತೆಗಳು ಅಕ್ಷರಶ: ಮರಗಳ ಎಲೆಗಳು ಮತ್ತು ಕೊಂಬೆಗಳಿಂದಲೇ ತುಂಬಿ ಹೋಗಿತ್ತು.

ಬಿಬಿಎಂಪಿ ಅಲ್ಲಲ್ಲಿ ಧರಾಶಯಿಯಾದ ಮರಗಳನ್ನು ತೆರವುಗೊಳಿಸಿದ್ದರೂ ಆ ಮರಗಳಿಂದ ಉದುರಿ ಬಿದ್ದಿದ್ದ ಎಲೆಗಳು ಮತ್ತು ಕೊಂಬೆಗಳನ್ನು ರಸ್ತೆ ಬದಿಗಳಲ್ಲಿಯೇ ಗುಡ್ಡೆ ಮಾಡಿ ಹಾಕಿದ್ದಾರೆ. ಮೊದಲೇ ಈಗ ಸುಡುಬಿಸಿಲಿನ ಸಮಯವಾದ್ದರಿಂದ ಎಲೆ- ಕೊಂಬೆಗಳು ಒಣಗಿ ಹೋಗಿದ್ದು, ತ್ಯಾಜ್ಯ ರಾಶಿಯಾಗಿ ಬದಲಾಗಿದೆ.

ಈ ಕಸದ ಗುಡ್ಡೆಗಳ ಪಕ್ಕದಲ್ಲೇ ಕಾರುಗಳು ಯಾವಾಗಲೂ ನಿಂತಿರುತ್ತವೆ. ಕಿಡಿಗೇಡಿಗಳೇನಾದರೂ ʼಕಟ್ಟಿಗೆ ರಾಶಿʼಗೆ ಬೆಂಕಿ ಇಟ್ಟರೆ ಪಕ್ಕದಲ್ಲಿ ಪಾರ್ಕ್‌ ಮಾಡಿರುವ ಹಲವಾರು ಕಾರುಗಳು ಸುಟ್ಟು ಹೋಗಿ ದೊಡ್ಡ ಅನಾಹುತವೇ ನಡೆದು ಹೋಗಬಹುದು. ಆದ್ದರಿಂದ ಸಂಬಂಧಿಸಿದವರು ಈಗಲೇ ಎಚ್ಚೆತ್ತರೆ ಒಳಿತು. ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ಸೃಷ್ಟಿಯಾದ ಈ ಗುಡ್ಡೆಗಳು ನಮಗೆ ಕಂಡುಬಂದಿದ್ದು ಬಿಟಿಎಂ ಲೇಔಟ್ ನ ಕುವೆಂಪುನಗರದಲ್ಲಿ.

- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Manjunath H D
PublicNext

PublicNext

04/05/2022 09:11 pm

Cinque Terre

42.77 K

Cinque Terre

0

ಸಂಬಂಧಿತ ಸುದ್ದಿ