ಆನೇಕಲ್ : ಸಂಜೆ ಸುರಿದ ಗಾಳಿಸಹಿತ ಮತ್ತು ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ಮಾರುದ್ದ ನೀರು ನಿಂತು ವಾಹನ ಸವಾರರು ಹೈರಾಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ಅತ್ತಿಬೆಲೆ ಸರ್ವಿಸ್ ರಸ್ತೆ ಬಳಿ ನಡೆದಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕ ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರದವರು ಸರಿಯಾದ ರಸ್ತೆ ಮಾಡದ ಹಿನ್ನೆಲೆಯಲ್ಲಿ ಜನರಿಗೆ ಅನಾನುಕೂಲವಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಅತ್ತಿಬೆಲೆಯ ಸರ್ವಿಸ್ ರಸ್ತೆಯಲ್ಲಿ ಸಂಜೆ ಮಳೆ ಬಿದ್ದ ಪರಿಣಾಮ ರಸ್ತೆಯಲ್ಲ ಜಲಾವೃತಗೊಂಡು ವಾಹನ ಸವಾರರು ಕಿರಿಕಿರಿ ಅನುಭವಿಸುವಂತ್ತಾಯಿತು.
ಇನ್ನು ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಅತ್ತಿಬೆಲೆ ಸರ್ವಿಸ್ ರಸ್ತೆಯಿದ್ದು ದಿನನಿತ್ಯ ಲಕ್ಷಾಂತರ ಗಾಡಿಗಳು ಸಂಚಾರಿಸುತ್ತವೆ ಆದರೆ ಸೂಕ್ತ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿಯ ಹೈವೇ ಅಥಾರಿಟಿ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಜನ ಮುಂದೆ ಸಾಗಿದ್ದಾರೆ.
PublicNext
01/05/2022 09:18 pm