ಬೆಂಗಳೂರು: ಬೇಸಿಗೆ ಬಂದರೆ ಸಾಕು ಆ ವಿದೇಶಿ ಅತಿಥಿಗಳಿಗೆ ಮೊದಲು ನೆನಪಿಗೆ ಬರುವುದು ನಮ್ಮ ಬೆಂಗಳೂರು. ವಿದೇಶದಿಂದ ಬೆಂಗಳೂರು ವಲಸೆಗೆ ಬಂದು ಬೇಸಿಗೆ ಎಂಜಾಯ್ ಮಾಡುತ್ತಾ ಸಂತಾನ ಬೆಳಸಿಕೊಂಡು ತಮ್ಮ ಪಕ್ಷಿ ಜಾತಿಗಳ ಸಂಖ್ಯೆ ಹೆಚ್ಚಳ ಮಾಡಿಕೊಂಡು ಮತ್ತೆ ತಮ್ಮ ದೇಶಕ್ಕೆ ವಾಪಸ್ ಹೋಗುತ್ತವೆ. ನಗರದ ಜನರು ಕೂಡ ನೋಡಿ ವಿದೇಶಿ ಪಕ್ಷಿಗಳನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ.
ಬಣ್ಣ ಬಣ್ಣದ ರೆಕ್ಕೆಗಳು ಕ್ಯೂಟ್ ಆಗಿ ಸ್ಕೆಚ್ ಹಾಕಿ ನಗರದ ಕೆರೆಯಲ್ಲಿ ಮೀನುಗಳನ್ನು ಬೇಟೆ ಆಡ್ತಿರುವ ವಿದೇಶಿ ಪಕ್ಷಿಗಳು. ಕಲರ್ ಕಲರ್ ವಿದೇಶಿ ಪಕ್ಷಿಗಳು ಬೇಸಿಗೆಯಲ್ಲಿ ನಮ್ಮ ಸಿಲಿಕಾನ್ ಸಿಟಿಗೆ ಬಂದು ಆಹಾರಕ್ಕಾಗಿ ಮಾಡುವ ಬೇಟೆ ನೋಡುವುದಕ್ಕೆ ಬಲು ಚಂದ. ವಿದೇಶದಿಂದ ಬಂದಿರುವ ಕಲರ್ ಕಲರ್ ಪಕ್ಷಿಗಳನ್ನು ನೋಡಿದರೆ ಸಾಕು ನಮಗೆ ಇರುವ ಎಲ್ಲ ನೂರೆಂಟು ಟೆನ್ಶನ್ ಹೋಗುತ್ತದೆ. ಇನ್ನೂ ಈ ದೃಶ್ಯಗಳು ಕಂಡು ಬಂದಿರುವುದು ಬೆಂಗಳೂರಿನ ಮಡಿವಾಳ ಕೆರೆಯಲ್ಲಿ.
ಇನ್ನೂ ವಿದೇಶಿ ಪಕ್ಷಿಗಳಲ್ಲಿ ಹಲವು ಜಾತಿಗಳು ಇವೆ ಅದರಲ್ಲಿ ನಮ್ಮ ಮಡಿವಾಳ ಕೆರೆ ಬಳಿ ನಮ್ಮ ದೇಶದ ಪಕ್ಷಿಗಳು ಹಾಗೂ ವಿದೇಶಿ ಪಕ್ಷಿಗಳು ಸೇರಿದಂತೆ ಸುಮಾರು ೧೩೧ ಜಾತಿಯ ಪಕ್ಷಿಗಳು ಬರುತ್ತವೆ. ನಾರ್ತ್ ವರ್ಲ್ಡ ನಲ್ಲಿ ಡಿಸೆಂಬರ್‌ನಲ್ಲಿ ಚಳಿಗಾಲ ಶುರುವಾಗುತ್ತದೆ ಹೀಗಾಗಿ ಮಾರ್ಚ್, ಎಪ್ರಿಲ್‌ನಲ್ಲಿ ಪಕ್ಷಿಗಳು ಸಂತಾನೋತ್ಪತ್ತಿಗೆ ಇಲ್ಲಿಗೆ ಬರುತ್ತವೆ. ಪೈನ್ಟೆಡ್ ಬರ್ಡ್, ರೆಡ್ ಹೆಡೆಡ್ ಐಬೀಸ್, ಬ್ಲಾಕ್ ಹೆಡೆಡ್ ಐಬೀಸ್, ಬ್ಲಾಕ್ ಹೆಡೆಡ್ ಐಬೀಸ್, ಗ್ಲಾಸಿ ಐಬೀಸ್, ಸ್ಪಾಟ್ ಬಿಲ್ಡ್ ಡಕ್, ಪರ್ಪಲ್ ಹರ್ನಿ, ಇಂತಹ ಜಾತಿಯ ಪಕ್ಷಿಗಳು ಯೂರೋಪ್, ಆಸ್ಟ್ರೇಲಿಯಾ, ಆಫ್ರಿಕಾ, ಸೌತ್ ಈಸ್ಟ್ ಏಷ್ಯಾ ಕಮಟ್ರೀಸ್‌ನಿಂದ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ.
ಒಟ್ಟಿನಲ್ಲಿ ಸುತ್ತಲಿನ ಜನರು ಪಾರ್ಕ್ ಹೋಗಿ ವಿದೇಶಿ ಪಕ್ಷಿಗಳನ್ನು ನೋಡಿ ಎಲ್ಲವನ್ನೂ ಮರೆತು ಎಂಜಾಯ್ ಮಾಡುತ್ತಾ ವಾಕಿಂಗ್ ಮಾಡ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
26/04/2022 10:09 am