ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜಲಾವೃತಗೊಂಡ ಜಯದೇವ ಅಂಡರ್ ಪಾಸ್

ಜಯನಗರ: ಮಳೆ ಬಂದಾಗೆಲ್ಲಾ ಜಯದೇವ ಕೆಳಸೇತುವೆ ಜಲಾವೃತಗೊಳ್ಳುತ್ತದೆ. ಬನ್ನೇರುಘಟ್ಟ ಮುಖ್ಯರಸ್ತೆಗೆ ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಮಳೆ ಬಂದಾಗ ಅಂಡರ್‌ಪಾಸ್ ಜಲಾವೃತವಾಗುತ್ತದೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆಯೂ ಉಂಟಾಗಲಿದ್ದು, ಈ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ.

ಇಲ್ಲಿನ ಸಮಸ್ಯೆಗೆ ಕಾರಣ ಅಂಡರ್‌ಪಾಸ್ ನಿರ್ವಹಣೆ ಸರಿಯಾಗಿ ಮಾಡದೇ ಇರುವುದು. ಹಾಗೇ ಅಂಡರ್‌ಪಾಸ್ ಡ್ರೈನ್ ಕೂಡಾ ಮುಚ್ಚಲಾಗಿದೆ. ಅಂಡರ್‌ಪಾಸ್‌ನಲ್ಲಿ ಎಲ್ಲೆಂದರಲ್ಲಿ ಕಸ ಮತ್ತು ಕಟ್ಟಡದ ಕಲ್ಲುಗಳನ್ನು ಸುರಿಯಲಾಗಿದೆ. ಇದರಿಂದಾಗಿ 4 ದಿನಗಳಿಂದ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಗಿದೆ. ಶೀಘ್ರದಲ್ಲೇ ಬಿಬಿಎಂಪಿ ಅಂಡರ್‌ಪಾಸ್ ಅನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನವೀನ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
PublicNext

PublicNext

20/04/2022 01:10 pm

Cinque Terre

40.09 K

Cinque Terre

0

ಸಂಬಂಧಿತ ಸುದ್ದಿ