ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರ ಬಾಯಲ್ಲೀಗ ಬಿರು ಬಿಸಿಲಿನದ್ದೇ ವಿಷಯ. ಅಬ್ಬಾ, ಎಷ್ಟೊಂದು ಸುಡುವ ಬಿಸಿಲು ಅಂತ ಕಳೆದೊಂದು ತಿಂಗಳಿನಿಂದ ಜನರು ಚಡಪಡಿಸುತ್ತಿದ್ದಾರೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಹವಾಮಾನ ಹಿತಕರ ಎಂದು ಹಿಂದಿನಿಂದಲೂ ನಂಬಿಕೆ ಇದೆ. ಆದರೆ ಈ ವರ್ಷ ಬೆಂಗಳೂರಿಗರು ಇದುವರೆಗೆ ಕಂಡಿರದಷ್ಟು ಬಿಸಿಲಿನ ಧಗೆಯನ್ನು ಅನುಭವಿಸುತ್ತಿದ್ದಾರೆ. ಮೋಡದ ರಚನೆಯಾಗದೆ ಒಣ ವಾತಾವರಣ ಹೊಂದಿರುವುದು ಈ ವರ್ಷ ಇಷ್ಟೊಂದು ಬಿಸಿಲಿಗೆ ಕಾರಣವೆಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಸರಾಸರಿ ತಾಪಮಾನ 35 ರಿಂದ 37.3 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. 1971 ರಿಂದ 2000 ದವರೆಗೆ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
PublicNext
17/03/2022 07:35 pm