ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನ ನಿಲ್ದಾಣದಲ್ಲಿ ನೀರು ಟ್ರ್ಯಾಕ್ಟರ್ ಹತ್ತಿದ ಪ್ರಯಾಣಿಕರು

ಬೆಂಗಳೂರು: ನಿನ್ನೆ ಸುರಿದ ಮಳೆಯಿಂದ ಇಡೀ ಬೆಂಗಳೂರು ತತ್ತರಿಸಿ ಹೋಗಿದೆ.ಇಲ್ಲಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಂತೂ ಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ಪ್ರಯಾಣಿಕರಂತೂ ಹೊರಗೆ ಬರೋಕೆ ಪರದಾಡಿ ಬಿಟ್ಟರು. ಟ್ರ್ಯಾಕ್ಟರ್ ಸಹಾಯ ಪಡೆದು ಸೇಫ್ ಆದರು.

ಬೆಂಗಳೂರು ಕೆರೆಗಳ ನಗರ. ಉದ್ಯಾನವನಗಳ ಬೀಡು. ಈಗ ಅದೆಲ್ಲ ಕೇವಲ ನೆನಪು. ಕೆರೆಗಳ ಮೇಲೆ ಮನೆ ಕಟ್ಟಿದರೆ ಏನ್

ಆಗಬೇಕು ? ಅಲ್ಲೂ ನೀರು ನುಗ್ಗುತ್ತದೆ. ಇದು ಇಲ್ಲಿಯ ಜನಕ್ಕೆ ಕಾಮನ್ ಆಗಿದೆ. ಆದರೆ ಕೆಂಪೇಗೌಡ ವಿಮಾನ ನಿಲ್ದಾಣ ದಿಬ್ಬದ ಮೇಲಿದೆ ಅಲ್ಲಿ ನೀರೂ ಬರೋಕೆ ಚಾನ್ಸ್ ಇಲ್ಲ ಅಂದು ಕೊಂಡ್ರೆ, ಮಳೆರಾಯ ವಿಮಾನ ನಿಲ್ದಾಣದ ಅಂಗಳಕ್ಕೂ ನುಗ್ಗಿದ್ದಾನೆ.

ನಿನ್ನೆ ಸುರಿದ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣ ಕೆರೆಯಾಗಿ ಬದಲಾಗಿತ್ತು. ಪ್ರಯಾಣಿಕರು ಅಲ್ಲಿಂದ ಹೊರಗೆ ಬರೋಕೆ ಹರಸಾಹಸ ಪಟ್ಟರು. ಟ್ರ್ಯಾಕ್ಟರ್ ಹತ್ತಿ ಆ ನೀರಿದ್ದ ಜಾಗದಿಂದ ಸೇಫ್ ಹೊರ ಬಂದರು. ಮಳೆರಾಯ ಈ ಸಲ ಬೆಂಗಳೂರು ವಿಮಾನ ನಿಲ್ದಾಣವನ್ನೂ ಬಿಟ್ಟಿಲ್ಲ ಅನ್ನೋದೇ ಈಗ ತಿಳಿದ ಸತ್ಯ.

Edited By :
Kshetra Samachara

Kshetra Samachara

12/10/2021 12:04 pm

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ