ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಳೆ ಗಾಲ ದಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ನೀಡುವ ಪರಿಹಾರ ಮೊತ್ತ 25 ಕೋಟಿ ಆಗಿದೆ. 2022- ಮೇ 19 ರಿಂದ ಅಗಷ್ಟ್ 4 ವರೆಗೆ ಪಾಲಿಕೆ ನೀಡಿರುವ ಮೊತ್ತ 25 ಕೋಟಿ ಆಗಿದೆ. ಮೇ ತಿಂಗ ಳಿಂದ ಇಲ್ಲಿಯವರೆಗೆ ಸರಿ - ಸುಮಾರು ಹತ್ತು ಸಾವಿರ ಮಂದಿಗೆ ಮಳೆ ಪರಿಹಾರ ಬಿಬಿಎಂಪಿ ನೀಡಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ರಾಜ ಕಾಲುವೆ ಹೂಳು ತೆಗೆಯದೇ ಇರುವುದು, ಮಳೆ ನೀರುಗಾಲುವೆ ನಿರ್ವಹಣೆ ಕೊರತೆ,ರಾಜಕಾಲುವೆ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳಲ್ಲಿ ಪ್ರತಿ ಮನೆಗೆ 25 ಸಾವಿರ ರೂ ಪರಿಹಾರ ನೀಡಲಾಗಿದೆ. ಇನ್ನೂ ಒಂದೊಂದು ಪ್ರದೇಶಗಳಲ್ಲಿ 2-3 ಭಾರಿ ಪರಿಹಾರವನ್ನು ಜನರು ಪಡೆದುಕೊಂಡಿದ್ದಾರೆ. ಹೀಗಾಗಿ ಪರಿಹಾರದ ಮೊತ್ತವನ್ನು ಪಾಲಿಕೆ 10 ಸಾವಿರ ರೂ ಗೆ ಇಳಿಕೆ ಮಾಡಿದೆ.
Kshetra Samachara
11/08/2022 12:26 pm