ಬೆಂಗಳೂರು: ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬಿಟ್ಟುಬಿಡದೆ ಸುರಿಯುತ್ತಿದೆ. ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆ ಹಿನ್ನೆಲೆ ವಿದ್ಯುತ್ ಅವಘಡಗಳಾಗಿ ಸಾವು ನೋವು ಸಂಭವಿಸುತ್ತಿದೆ.
ಇದರಿಂದ BESCOM ಎಚ್ಚೆತ್ತುಕೊಂಡು ಬೆಂಗಳೂರು ಮಹಾನಗರದಲ್ಲಿ ಜನಜಾಗೃತಿಗೆ ಮುಂದಾಗಿದೆ. ಬೆಂಗಳೂರಿನ ಮಹಾಜನರೆ, ಯಾರು ವಿದ್ಯುತ್ ಕಂಬ, ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್ ಮುಟ್ಟಬೇಡಿ. ಯಾವುದೇ ರೀತಿಯ ಸಮಸ್ಯೆ ಇದ್ದರೆ ಕೂಡಲೇ ಬೆಸ್ಕಾಂನ ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಲೌಡ್ ಸ್ಪೀಕರ್ ಮೂಲಕ ತಿಳಿಸಲಾಗ್ತಿದೆ.
ಏನೇ ವಿಷಯ ತಿಳಿಸಬೇಕೆಂದರೂ ಮೊದಲೆಲ್ಲಾ ಗ್ರಾಮಗಳಲ್ಲಿ ತಮಟೆ ಮೂಲಕ ಡಂಗೂರ ಹೊಡೆಸಲಾಗ್ತಿತ್ತು. ಇದೀಗ ಟೆಕ್ನಾಲಜಿ ಚೇಂಜ್ ಆಗಿದೆ. ತರಕಾರಿ ವ್ಯಾಪಾರ, ಸಣ್ಣ ಸಭೆ ಸಮಾರಂಭಗಳಲ್ಲಿ ಬಳಸಲಾಗ್ತಿದ್ದ ರೆಕಾರ್ಡೆಡ್ ಆಡಿಯೋ ಸೌಂಡ್ ಕ್ಲಿಪ್ ನ ಸ್ಪೀಕರ್ ಮೈಕ್ ಗೆ ಹಾಕಿ ಅನೌನ್ಸ್ ಮಾಡುತ್ತಿದ್ದದ್ದು ಹೊಸ ವಿಧಾನದ ಸದ್ಬಳಕೆ ಎಂದರೆ ತಪ್ಪಲ್ಲ.. BESCOM ನ ಪ್ರಯತ್ನ ಅತ್ಯದ್ಭುತವಾಗಿದೆ.
SureshBabu Public Next ಬೆಂಗಳೂರು..
PublicNext
21/05/2022 11:28 am