ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಮಡಿವಾಳ ಕೆರೆಯಲ್ಲಿ ಬೋಟಿಂಗ್ ನಿಲ್ಲಿಸಲಾಗಿತ್ತು. ನಂತರ ಕೆಲ ತಿಂಗಳುಗಳ ಹಿಂದಷ್ಟೇ ಮತ್ತೆ ಕೆರೆಯಲ್ಲಿ ಬೋಟಿಂಗ್ ಆರಂಭಗೊಂಡಿತ್ತು. ಆದರೆ ಈಗ ಬೋಟಿಂಗ್ ಮತ್ತೆ ಸ್ಥಗಿತಗೊಂಡಿದೆ.
ಇದಕ್ಕೆ ಕಾರಣವಾಗಿದ್ದು, ಕೆರೆಯಲ್ಲಿ ತುಂಬಿರುವಂತಹ ಗಿಡಗಳು. ಬೆಂಗಳೂರು ನಗರದಲ್ಲಿ ಇದೊಂದೇ ಕೆರೆಯಲ್ಲಿ ಬೋಟಿಂಗ್ ಇರುವ ಕಾರಣ ಇಲ್ಲಿಗೆ ಹಲವಾರು ಪ್ರವಾಸಿಗರು ಬರುತ್ತಾರೆ. ಆದರೆ ಈಗ ಬೋಟಿಂಗ್ ನಿಂತಿರುವುದನ್ನು ಕಂಡು ವಾಪಾಸ್ ಹೋಗುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯಕ್ಕೂ ಕೂಡ ಬ್ರೇಕ್ ಬಿದ್ದಿದೆ. ಇನ್ನು ಸ್ಥಳದಿಂದ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
29/07/2022 03:08 pm