ಸಿಲಿಕಾನ್ ಸಿಟಿ ಹಚ್ಚು ಹಸಿರು ಆಗಿ ಕಾಣದೋ ಈ ಮರ-ಗಿಡಗಳಿಂದ. ಆದ್ರೆ ಅಲ್ಲಲ್ಲಿ ಮರಗಳ ಕೊಂಬೆಗಳು, ವಯಸ್ಸಾದ ಮರಗಳು ಜನರ ಮೇಲೆ ಬಿದ್ದು, ಜೀವ ಕಳೆದುಕೊಳ್ತಿದ್ದಾರೆ. ಎಷ್ಟೊ ವಯಸ್ಸಾದ ಮರಗಳನ್ನ ತೆರವು ಮಾಡದೆ ಜನರ ಜೀವನದಲ್ಲಿ ಬಿಬಿಎಂಪಿ ಆಟವಾಡ್ತಿದ್ದಾರೆ. ಮೊನ್ನೆ ತಾವರೆಕೆರೆಯ ಹತ್ತಿರ ಮಗು ಮೇಲೆ ಮರ ಪರಿಣಾಮ ಮಗು ಪ್ರಾಣಪಾಯಕ್ಕೆ ಸಿಲುಕಿತ್ತು.
ಅದೇ ರೀತಿ ಯಶವಂತಪುರ ಮರಿಯಪ್ಪನಪಾಳ್ಯದಲ್ಲಿ ಮರ ಬಿದ್ದ ಕಾರಣ ಮರಿಯಪ್ಪನಪಾಳ್ಯದಿಂದ ಚೆಕ್ ಪೋಸ್ಟ್‌ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಕೂಡಲೆ ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಸದ್ಯ ಯಾವ್ದೆ ಪ್ರಾಣಾಪಾಯ ಸಂಭವಿಸಿಲ್ಲ. ಆದ್ರೆ ಮರ ಬಿದ್ದ ಕಾರಣ ಬೆಸ್ಕಾಂ ಸೇರಿದಂತೆ, ಹಲವೆಡೆ ವಯರ್‌ಗಳ ಡಾಮೇಜ್ ಆಗಿದ್ದಾವೆ. ಆ ಏರಿಯಾ ಪೂರ್ತಿ 2-3 ಗಂಟೆಗಳ ಪವರ್ ಕಟ್ ಆಗಿದೆ. ಸುಮಾರು ವರ್ಷದ ಹಳೆಯ ಮರ ಹೀಗಾಗಿ ಬಿದ್ದಿದೆ ಅಂತಾರೆ ಸ್ಥಳೀಯರು ಹೇಳಿದ್ದಾರೆ.
ಇನ್ನೂ ಈ ರಸ್ತೆಯಲ್ಲಿ ಈ ತರ ಬೀಳುವ ಮರ ಬಹಳಷ್ಟಿದೆ. ಇಲ್ಲಿಂದ ಕೆಂಗೇರಿಯ ವರೆಗೂ ವಯಸ್ಸಾದ ಮರಗಳು ಹೆಚ್ಚಾಗಿದ್ದು, ಕೂಡಲೇ ಪರಿಶೀಲಿಸಿ ಹಳೆಯ ಮರಗಳನ್ನ ತೆರವೂ ಮಾಡಿ ಮತ್ತೆ ಆ ಜಾಗಕ್ಕೆ ಹೊಸ ಗಿಡವನ್ನ ನೆಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
16/08/2022 07:59 pm