ಬೆಂಗಳೂರು: ಮಡಿವಾಳ ಕೆರೆ ಮಡಿಲಲ್ಲಿ ಗಿಡ ನಾಟಿ; "ಪರಿಸರ ಪ್ರೇಮವೇ ಜೀವ ಸಂಜೀವಿನಿ"
ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಡಿವಾಳ ಕೆರೆಯಲ್ಲಿ ಬೆಳಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಸೇರಿ ಕೆರೆಯ ಅಂಗಳದಲ್ಲಿ ಗಿಡ ನೆಟ್ಟರು.
ಈ ಸಂದರ್ಭ DCF ರವಿಶಂಕರ್ ಮತ್ತು RFO ಶಿವರಾತ್ರೇಶ್ವರ ಸ್ವಾಮಿ ಅವರು ಸ್ಥಳೀಯರಿಗೆ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿ, ಗಿಡ-ಮರ ಬೆಳೆಸುವಂತೆ ಮನವಿ ಮಾಡಿಕೊಂಡರು. 275 ಎಕರೆ ವಿಸ್ತಾರದ ಮಡಿವಾಳ ಕೆರೆಯ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಪರ್ಫೆಕ್ಟ್ ರಾಗ NGO ಕೂಡ ಅರಣ್ಯ ಇಲಾಖೆ ಜೊತೆ ಕೈಜೋಡಿಸಿತ್ತು.
Kshetra Samachara
05/06/2022 06:00 pm