ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿ ದಿನನಿತ್ಯ ಪೀಕ್ ಅವರ್‌ನಲ್ಲಿ ಟ್ರಾಫಿಕ್ ಜಾಮ್ ಸರ್ವೇ ಸಾಮಾನ್ಯವಾಗಿತ್ತು. ದಿನನಿತ್ಯ ಹಲವಾರು ಶಾಲೆಯ ವಾಹನಗಳು ಮತ್ತು ಕೆಲಸಕ್ಕೆ ಹೋಗುವಂತಹ ಜನರು ಇದೇ ರಸ್ತೆಯನ್ನು ದಿನನಿತ್ಯ ಉಪಯೋಗಿಸಬೇಕಾಗಿತ್ತು. ಆದರೆ ಪೀಕ್ ಅವರ್‌ನಲ್ಲಿ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗುತ್ತಿತ್ತು. ಅದಕ್ಕೆ ಕಾರಣವಾಗಿತ್ತು ಇಲ್ಲಿ ಓಡಾಡುವ ಟಿಪ್ಪರ್ ಲಾರಿಗಳು.
ಸರ್ಜಾಪುರದಿಂದ ನಗರಕ್ಕೆ ಪ್ರವೇಶ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಇಂದು ಟ್ರಾಫಿಕ್ ಪೊಲೀಸರು ತಡೆದು ಪೀಕ್ ಅವರ್‌ನಲ್ಲಿ ಟಿಪ್ಪರ್ ಲಾರಿಗಳು ರಸ್ತೆಯ ಮೇಲೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಟಿಪ್ಪರ್ ಲಾರಿಗಳ ನಿರ್ಬಂಧದಿಂದ ಸರ್ಜಾಪುರ ರಸ್ತೆಯಲ್ಲಿ ಇನ್ನು ಮೇಲಾದರೂ ಟ್ರಾಫಿಕ್ ಕಂಟ್ರೋಲ್ ಆಗುತ್ತಾ ಅಂತ ಕಾದುನೋಡಬೇಕಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
23/06/2022 03:31 pm