ಬೆಂಗಳೂರು: ಕೊರೊನಾ ಹೊಡೆತದಿಂದ ಮಡಿವಾಳ ಕೆರೆಗೆ ಪ್ರವಾಸಿಗರು ಬರಲು ನಿರ್ಬಂಧ ಹೇರಲಾಗಿತ್ತು. ಕೊರೊನಾ ಕಳೆದು ತಿಂಗಳುಗಳೇ ಆಗಿಹೋಗಿದೆ. ಈಗ ಮಡಿವಾಳ ಕೆರೆ ಪ್ರವಾಸಿಗಳಿಗೆ ಓಪನ್ ಕೂಡ ಆಗಿದೆ.ಆದರೆ ಬೆಸ್ಕಾಂ ಈಗ ಪಾರ್ಕ್‌ನ ಕರೆಂಟ್ ಕಟ್ ಮಾಡಿದ್ದಾರೆ. ಯಾಕೆಂದರೆ ಕೊರೋನಾ ಲಾಕ್ಡೌನ್ ವೇಳೆ ಮಡಿವಾಳ ಕೆರೆಯು ಬಿಬಿಎಂಪಿಗೆ ಹಸ್ತಾಂತರಗೊಂಡಿತ್ತು.
ಹಸ್ತಾಂತರದ ನಂತರ ಬಿಬಿಎಂಪಿ ಬೆಸ್ಕಾಂನ ಬಿಲ್ ಕಟ್ಟಿಲ್ಲ. 6 ತಿಂಗಳಿನ ಬೆಸ್ಕಾಂ ಬಿಲ್ ಬಾಕಿ ಇದ್ದು ಇಲ್ಲಿಯವರೆಗೂ ಯಾರೂ ಕಟ್ಟದ ಕಾರಣ ಈಗ ಬೆಸ್ಕಾಂ ಪಾರ್ಕ್‌ನ ವಿದ್ಯುತ್ ಕಟ್ ಮಾಡಿ ಬಿಸಿ ಮುಟ್ಟಿಸಿದ್ದಾರೆ. 16323 ಮೂರು ರೂಪಾಯಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ಬಿಲ್ ಕಟ್ಟದ ಕಾರಣ ಈಗ ಬೆಸ್ಕಾಂ ಕರೆಂಟ್ ಕಟ್ ಮಾಡಿದ್ದಾರೆ.
ಕರೆಂಟ್ ಕಟ್ ಮಾಡಿರೋದ್ರಿಂದ ಕೆರೆಯಲ್ಲಿ ಅಳವಡಿಸಿರುವ ವಾಟರ್ ಫೌಂಟೇನ್ ಕೆಲಸ ಮಾಡದೆ ನಿಂತಿದೆ. ಮತ್ತು ಉದ್ಯಾನದ ಲೈಟ್‌ಗಳು ಬಂದ್ ಆಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕರೆಂಟ್ ಬಿಲ್ ಪಾವತಿಸಬೇಕು. ಇದರಿಂದ ಮಡಿವಾಳ ಕೆರೆಗೆ ಬರುವ ಪ್ರವಾಸಿಗಳಿಗೆ ಕೆರೆಯಲ್ಲಿನ ಕಾರಂಜಿಯ ಅಂದ ಕಣ್ತುಂಬಿಕೊಳ್ಳಬಹುದಾಗಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
ಐಕಾನ್- ಕೆರೆಗೆ ಸುತ್ತ ಕರೆಂಟ್ ಕೊಡ್ರೋ
PublicNext
08/06/2022 06:13 pm