ನೆಲಮಂಗಲ: ಬಿಎಂಟಿಸಿ ಬಸ್ ಗಳು ಬಡಾವಣೆಯ ಒಳರಸ್ತೆಯಲ್ಲಿ ಸಂಚರಿಸದಂತೆ ಸ್ಥಳೀಯರು
ರಸ್ತೆಗೆ ಅಡ್ಡಲಾಗಿ ಕಲ್ಲಿನ ಕಂಬ ಮತ್ತು ಫೆನ್ಸಿಂಗ್ ಅಳವಡಿಸಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಶಿವನಪುರದ ಪಾಂಡುರಂಗ ಗ್ರೀನ್ ಸಿಟಿ ಬಡಾವಣೆಯಲ್ಲಿ ನಡೆದಿದೆ.
ದಾಸನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಪುರ ಗ್ರಾಮದಲ್ಲಿರೋ ಬಸ್ ಡಿಪೋ 43ರಿಂದ ನಗರಕ್ಕೆ ಸಂಚರಿಸೋ 70ಕ್ಕೂ ಹೆಚ್ಚು ಬಸ್ ಗಳು 8 ವರ್ಷದಿಂದ ಇದೇ ರಸ್ತೆ ಮೂಲಕ ಅರಿಶಿನಕುಂಟೆ ಮಾರ್ಗವಾಗಿ ನೆಲಮಂಗಲ ನಗರದ ಬಸ್ ನಿಲ್ದಾಣಕ್ಕೆ ಹೋಗುತ್ತಿವೆ.
ನೆಲಮಂಗಲದಿಂದ ಮೆಜೆಸ್ಟಿಕ್ ಮತ್ತು ತಾಲ್ಲೂಕಿನ ಹಲವು ಹಳ್ಳಿಗಳಿಗೆ ಬಸ್ ಸಂಚರಿಸುತ್ತಿವೆ. ಆದ್ರೆ, ಪಾಂಡುರಂಗ ಬಡಾವಣೆಯಲ್ಲಿ ಇತ್ತೀಚೆಗೆ ಮನೆ ನಿರ್ಮಿಸಿಕೊಂಡಿರೋ ಸ್ಥಳೀಯ ನಿವಾಸಿ ಲೋಕೇಶ್ ಮತ್ತವರ ಜೊತೆಯಲ್ಲಿನ ಕೆಲವರು ಬೆಳಿಗ್ಗೆ ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಲಾಗಿ ಫೆನ್ಸಿಂಗ್ ಮಾಡಿ ಬಸ್ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮನೆ ಎದುರಿನ ರಸ್ತೆಯಲ್ಲಿ ಬಸ್ ಗಳು ಸಂಚರಿಸೋದ್ರಿಂದ ಮನೆಯೊಳಗೆ ಧೂಳು ಬರುತ್ತೆ ಎಂಬುದಾಗಿದೆ!
ಈ ಇದರಿಂದಾಗಿ ಬಸ್ ಗಳು 6- 7 ಕಿ.ಮೀ. ಬಳಸಿಕೊಂಡು ರಾವುತ್ತನಹಳ್ಳಿ ಸಾಗಬೇಕಾಗಿದ್ದು, ಹೀಗೆ ಸುತ್ತು ಬಳಸಿಕೊಂಡು ಬರುವುದರಿಂದ ಒಂದೊಂದು ಬಸ್ ಗೆ 2- 3 ಲೀಟರ್ ನಷ್ಟು ಡೀಸೆಲ್ ನಷ್ಟವಾಗುತ್ತಿದೆ. ಹೀಗಾಗಿ ಪಿಡಿಒ ಮತ್ತು ಮಾದನಾಯಕನಹಳ್ಳಿ ಠಾಣೆ ಪೊಲೀಸ್ರಿಗೂ ದೂರು ನೀಡಲಾಗಿದೆ ಎಂದು ಡಿಪೋ ಕಂಟ್ರೋಲರ್ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
Kshetra Samachara
30/05/2022 10:42 pm