ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ದಕ್ಷಿಣ : ಟೊಯೋಟಾ ದಿಂದ ರಸ್ತೆ ಅಪಘಾತದ ಬಗ್ಗೆ ಜನಜಾಗೃತಿ

ಬೆಂಗಳೂರು ದಕ್ಷಿಣ: ರಸ್ತೆ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಟೊಯೋಟಾ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜನರಿಗೆ ಜಾಗೃತಿ ಮೂಡಿಸಲಾಯಿತು..

ಜಿಗಣಿ ಕೈಗಾರಿಕಾ ಪ್ರದೇಶದ ಓಟಿಸಿ ಸರ್ಕಲ್ ನಿಂದ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ರಸ್ತೆಯ ಅಪಘಾತ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು.

ಈ ಬಗ್ಗೆ ಮಾತನಾಡಿದ ಟೊಯೋಟಾ ಸಂಸ್ಥೆಯ ಆಯೋಜಕ ಮಂಜುನಾಥ್, ಸರ್ಕಾರ ಹಾಗೂ ಪೊಲೀಸರು ಈ ಕೆಲಸ ಮಾಡಬೇಕಾಗಿಲ್ಲ. ಜನಸಾಮಾನ್ಯರು ಕೂಡ ಜಾಗೃತಿ ಮೂಡಿಸಬಹುದು.ರಸ್ತೆ ಅಪಘಾತಗಳು ಹೆಚ್ಚಾಗಿದ್ದು ಸಾರ್ವಜನಿಕರು ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ತೋರಿತ್ತಿದ್ದಾರೆ. ವಾಹನ ಸವಾರರು ಮುಖ್ಯವಾಗಿ ಹೆಲ್ಮೆಟ್ ಅನ್ನು ಧರಿಸಿ ವಾಹನ ಚಾಲನೆ ಮಾಡಬೇಕು.ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಿಗೆ ಸಂದೇಶವನ್ನು ಭಿತ್ತಿಚಿತ್ರದ ಮೂಲಕ ಸಾರಿದರು.

Edited By :
Kshetra Samachara

Kshetra Samachara

31/03/2022 06:01 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ