ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪರಿಶಿಷ್ಟರ ಗುಡಿಸಲುಗಳಿಗೆ ಬೆಂಕಿ ಇಟ್ಟವರ ವಿರುದ್ಧ ಕೇಸ್‌ ದಾಖಲಿಸಿ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಕನಕೇನಹಳ್ಳಿ ಗ್ರಾಮದಲ್ಲಿ‌ ಗುಡಿಸಲುಗಳಿಗೆ ಬೆಂಕಿಯಿಟ್ಟ ಮುತ್ತುರಾಜೇಗೌಡ, ಅವರ ಪುತ್ರ ಮಧು ಹಾಗೂ ಅವರ ಜೊತೆಗಿದ್ದ‌ ಮೊತ್ತೊಬ್ಬನ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ನೇತೃತ್ವದಲ್ಲಿ ಗ್ರಾಮಸ್ಥರು ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮೂಲಕ‌ ಬಂದ ಗ್ರಾಮಸ್ಥರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ಗುಡಿಸಲಿಗೆ ಬೆಂಕಿಯಿಟ್ಟಿರುವ ಬಗ್ಗೆ‌ ಸಾಕ್ಷ್ಯ ನೀಡಿದರೂ ದೊಡ್ಡಬೆಳವಂಗಲ ಪೊಲೀಸರು‌ ಎಫ್ಐಆರ್ ದಾಖಲಿಸದೇ ಎನ್‌ಸಿ (ವಾರೆಂಟ್ ಇಲ್ಲದೇ ಬಂಧಿಸುವ ಅಧಿಕಾರವಿಲ್ಲ) ಕೊಟ್ಟು ಕಳುಹಿಸಿದ್ದಾರೆ. ಗುಡಿಸಲು ಕಳೆದುಕೊಂಡವರನ್ನು ಹೊರಗೆ ನಿಲ್ಲಿಸಿ, ಬೆಂಕಿ ಇಟ್ಟವನಿಗೆ ಕುರ್ಚಿ ಹಾಕಿ ಕೂರಿಸಲಾಗಿದೆ. ಪೊಲೀಸರ ಈ ಧೋರಣೆ ಅಕ್ಷಮ್ಯ. ಶೋಷಿತರಿಗೆ ರಕ್ಷಣೆ ನೀಡಿ, ಸಾಮಾಜಿಕ ನ್ಯಾಯ ಕಾಪಾಡುವವರೇ ಬಲಾಡ್ಯರ ಬೆನ್ನಿಗೆ ನಿಂತಂತೆ ಅನಿಸುತ್ತಿದೆ. ತಕ್ಷಣವೇ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾ ವಿಮೋಚನಾ ಚಳವಳಿ ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ಪೊಲೀಸರ‌ ಪಕ್ಷಪಾತ ಧೋರಣೆ ಸರಿಯಿಲ್ಲ. ಸರ್ಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಗುಡಿಸಲಿಗೆ ರಾತ್ರೋರಾತ್ರಿ ಬೆಂಕಿ ಇಟ್ಟವರನ್ನು ಸುಮ್ಮನೆ ಬಿಡಬಾರದು. ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಡ ಕುಟುಂಬಗಳಿಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಹನುಮಣ್ಣ ಗುಳ್ಯ ಮಾತನಾಡಿ, ವ್ಯಾಜ್ಯ ನ್ಯಾಯಾಲಯದಲ್ಲಿದ್ದರೂ ಗುಡಿಸಲಿಗೆ ಬೆಂಕಿ ಹಚ್ಚುವ ಮೂಲಕ ಮುತ್ತುರಾಜೇಗೌಡ ಉದ್ಧಟತನ ತೋರಿದ್ದಾರೆ. ಅವರ ಪುತ್ರ ಹಾಗೂ ಅವರಿಗೆ ಸಹಕಾರ ನೀಡಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾನಿರತರನ್ನ ಉದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ನಾಗರಾಜ್, ವ್ಯಾಜ್ಯ ಕೋರ್ಟಿನಲ್ಲಿ ಇರುವ ಕಾರಣ ಪೊಲೀಸರು ಮಧ್ಯಪ್ರವೇಶ ಮಾಡುವಂತಿಲ್ಲ. ಆದರೂ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲು ಸೂಚಿಸುತ್ತೇನೆ ಎಂದು ಹೇಳಿದರು.

Edited By :
Kshetra Samachara

Kshetra Samachara

06/05/2022 03:19 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ