ನೆಲಮಂಗಲ: ಅವರೆಲ್ಲ ನಿವೃತ್ತಿ ಸಮಯದ ನೆಮ್ಮದಿ ಜೀವನಕ್ಕಾಗಿ ಪ್ರತಿಷ್ಠಿತ ಸಂಸ್ಥೆಯ ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದ್ರು. ಸಂಸ್ಥೆಯವರು ಮನೆಯನ್ನೇನೊ ಅಲರ್ಟ್ ಮಾಡಿದ್ರು. ಆದ್ರೆ, ಇಲ್ಲಿ ಇವ್ರು ವಾಸ ಮಾಡ್ತಾ ಇರೋ ಯಾವ ಮನೆಗೂ ಸಹ ಇವರ ಹೆಸರಿಲ್ವಂತೆ! ಮನೆ ಸಂಬಂಧಿತ ಯಾವ ಸಣ್ಣ ದಾಖಲೆ ಪತ್ರ ಕೂಡ ನೀಡಿಲ್ವಂತೆ. ಹೀಗಾಗಿ ಹಿರಿಯ ಜೀವಗಳು ಬೀದಿಗಿಳಿದು ಪ್ರತಿಭಟನೆ ನಡೆಸ್ತಿದ್ದಾರೆ.
ಹೌದು, ಬೆಂ. ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಬಳಿಯ ಕುದುರೆಗೆರೆ ಮುಖ್ಯರಸ್ತೆಯಲ್ಲಿರೋ ಎಲ್‌ಐಸಿ ಹೆಚ್‌ಎಫ್‌ಎಲ್ ಕೇರ್ ಹೋಮ್ಸ್ ನಲ್ಲಿ ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದ ವೇಳೆ ಸ್ವಂತ ಸೂರುಕೊಳ್ಳಲು 2006ರಲ್ಲಿ ಎಲ್ ಐಸಿ ಹೌಸಿಂಗ್ ಫೈನಾನ್ಸ್ ಲಿ. ಕೇರ್ ಹೋಮ್ಸ್ ಆಡಳಿತ ಮಂಡಳಿ ನಿರ್ಮಾಣದ 97 ಸಣ್ಣಮನೆಗಳಿಗೆ ತಲಾ 9 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ರು. ಜೊತೆಗೆ ಇತ್ತೀಚೆಗೆ 20 ಸಾವಿರ ತೆರಿಗೆ ಪಾವತಿ ಮಾಡುವಂತೆ ಕಂಪನಿಯಿಂದ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಇಲ್ಲಿವರೆಗೂ ಪಾವತಿ ಮಾಡಿದ್ದ ಹಣಕ್ಕೆ ದಾಖಲೆ ಪತ್ರ ನೀಡಿಲ್ವಂತೆ!
ಇವರು ಮನೆಗೆ ಸೇರಿಕೊಳ್ಳಲು ಆಕ್ಯುಪೆನ್ಸಿ ಪತ್ರ ನೀಡಿರೋದನ್ನ ಬಿಟ್ಟರೆ ಇವರ ಹೆಸರಿಗೆ ಯಾವುದೇ ದಾಖಲೆ ವರ್ಗಾಯಿಸಿಲ್ಲ. ಈ ಕೂಡಲೇ ಅಧಿಕೃತ ದಾಖಲೆ ನೀಡಲು ನಿವಾಸಿಗಳು ಒತ್ತಾಯಿಸಿದ್ದಾರೆ. ಮನೆಗಳಿಗೆ ಕಾನೂನು ರೀತಿ ಹಕ್ಕುಪತ್ರ ಒದಗಿಸಬೇಕು, ಆರಂಭದಲ್ಲಿ ಹೂಡಿಕೆ ಮಾಡಿದ ನಿರ್ವಹಣೆ ನಿಧಿಗೆ ಬಡ್ಡಿ ಜಮೆ ಮಾಡಬೇಕು. ಕಂಪನಿ ನೇಮಿಸಿದ ಸಿಬ್ಬಂದಿಗೆ ಸಂಬಳ ಭರಿಸಬೇಕು. ಬೆಂಗಳೂರು ಕ್ಯಾಂಪಸ್‌ನಿಂದ ಬರುವ ಆದಾಯ ಇದೇ ಕ್ಯಾಂಪಸ್ ಅಭಿವೃದ್ಧಿಗೆ ಬಳಸಬೇಕು. ರಸ್ತೆ ಸಹಿತ ಮೂಲ ಸೌಕರ್ಯ ಒದಗಿಸಬೇಕೆಂದು ನಿವಾಸಿಗಳು ಆಗ್ರಹಿಸಿದರು.
Kshetra Samachara
07/03/2022 08:12 pm