ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿ.ಜಿ ಬಾತ್ ರೂಮ್‌ನಲ್ಲಿ ಶವವಾಗಿ ಯುವಕ ಪತ್ತೆ

ಬೆಂಗಳೂರು: ಪಿ.ಜಿಯಲ್ಲಿ ವಾಸವಾಗಿದ್ದ ಯುವಕ ಅದೇ ಪಿಜಿಯ ಬಾತ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಾವನ್ನಪ್ಪಿ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು, ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಘಟನೆ ನಡೆದಿದೆ.

ಅನಿಲ್ ಕುಮಾರ್ ಮೃತ ಯುವಕನಾಗಿದ್ದು, ಗೋವಿಂದರಾಜನಗರ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ‌. ದಾಸರಹಳ್ಳಿಯ ಪಿಜಿಯಲ್ಲಿ ವಾಸವಿದ್ದ ಅನಿಲ್ ಕುಮಾರ್ ಸೆಪ್ಟೆಂಬರ್ 16ರಿಂದಲೂ ನಾಪತ್ತೆಯಾಗಿದ್ದ. ಸೆಪ್ಟೆಂಬರ್ 20ರಂದು ಬಾತ್ ರೂಮಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅನಿಲ್ ಕುಮಾರ್ ಶವ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕೊನೆಯದಾಗಿ ಅನಿಲ್ ರಾತ್ರಿ ಬಾತ್ ರೂಮ್‌ಗೆ ತೆರಳಿತ್ತಿದ್ದ ದೃಶ್ಯ ಕಂಡುಬಂದಿದೆ.

ಕಡೆಯದಾಗಿ ಮನೆಗೆ ಕರೆ ಮಾಡಿದಾಗ ಫುಡ್ ಪಾಯಿಸನ್ ಬಗ್ಗೆ ಅನಿಲ್ ಹೇಳಿಕೊಂಡಿದ್ದು ಯಾವುದೇ ಸುರಕ್ಷ್ಯತಾ ಕ್ರಮಗಳಿಲ್ಲದಿರುವುದೇ ಮಗನ ಸಾವಿಗೆ ಕಾರಣವೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಗೊವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Somashekar
Kshetra Samachara

Kshetra Samachara

30/09/2022 04:45 pm

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ