ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಲ್ಡರ್ ವಿರುದ್ಧ ದೂರು ದಾಖಲಿಸಿದ ಅಪಾರ್ಟ್ಮೆಂಟ್ ನಿವಾಸಿಗಳು

ಬೆಂಗಳೂರು: ಔಟರ್ ರಿಂಗ್ ರೋಡ್ ರಸ್ತೆಯಲ್ಲಿರುವ ಐಷಾರಾಮಿ `ಸ್ಟರ್ಲಿಂಗ್ ಅಸೆಂಟಿಯಾ' ವಸತಿ ಅಪಾರ್ಟ್ಮೆಂಟ್ ಸಮುಚ್ಚಯದ ಮನೆ ಮಾಲೀಕರು ಸೋಮವಾರ ತಮ್ಮ ಬಿಲ್ಡರ್ ವಿರುದ್ಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ದೂರುಗಳನ್ನು ದಾಖಲಿಸಿದ್ದಾರೆ.

ಆವರಣದೊಳಗೆ ನಿರ್ಮಾಣ ಚಟುವಟಿಕೆಯಿಂದ ಉಂಟಾಗುವ ಅತಿಯಾದ ಶಬ್ಧ, ಕಾರ್ಯನಿರ್ವಹಿಸದ ನೀರು ಸಂಸ್ಕರಣಾ ಘಟಕ (WTP), ಕೊಳಚೆನೀರು ಸಂಸ್ಕರಣಾ ಘಟಕ (STP), ಕುಡಿಯುವ ನೀರು ಪೂರೈಕೆಯ ಕೊರತೆಗೆ ಸಂಬಂಧಪಟ್ಟಂತೆ, ಹಾಗೂ ಎರಡು ನೆಲಮಾಳಿಗೆಗಳು ಸೆಪ್ಟೆಂಬರ್ 5 ರಂದು ಪ್ರವಾಹಕ್ಕೆ ಒಳಗಾಗಿದ್ದಕ್ಕೆ, ಮತ್ತು ಕಾರು ಹಾನಿಗಾಗಿ, ಇದರ ಜೊತೆಗೆ, ಬಿಲ್ಡರ್ ಸ್ಟರ್ಲಿಂಗ್ ಅರ್ಬನ್ ವೆಂಚರ್ ಪ್ರೈವೇಟ್ ಲಿಮಿಟೆಡ್ ತನ್ನ ಕಚೇರಿಯನ್ನು ಸಂಕೀರ್ಣದೊಳಗೆ ಬೀಗ ಹಾಕಿದ್ದಕ್ಕಾಗಿ ನಿವಾಸಿಗಳು ದೂರು ದಾಖಲಿಸಿದ್ದಾರೆ.

ಬೆಳ್ಳಂದೂರಿನಲ್ಲಿ 172 ಫ್ಲಾಟ್‌ಗಳನ್ನು ಒಳಗೊಂಡ ಬಹುಮಹಡಿ ಕಟ್ಟಡದಲ್ಲಿ 5 ಮತ್ತು 6 ರ ನೆಲಮಾಳಿಗೆಗೆ ನೀರು ನುಗ್ಗಿದ್ದರಿಂದ ಒಟ್ಟು 29 ಕಾರುಗಳು ಮುಳುಗಿತ್ತು. ಹಾನಿಗೊಳಗಾದ ಎಸ್‌ಟಿಪಿ ಮತ್ತು ಡಬ್ಲ್ಯುಟಿಪಿಗೆ ಸಂಬಂಧಿಸಿದಂತೆ ಬಿಲ್ಡರ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸ್ಟರ್ಲಿಂಗ್ ಅಸೆಂಟಿಯಾ ನಿವಾಸಿಗಳ ಸಂಘದ ಸದಸ್ಯ ಅಂಶು ಖಚಿತಪಡಿಸಿದ್ದಾರೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Somashekar
PublicNext

PublicNext

21/09/2022 05:44 pm

Cinque Terre

28.18 K

Cinque Terre

0

ಸಂಬಂಧಿತ ಸುದ್ದಿ