ಬೆಂಗಳೂರು: ಸಾಮಾನ್ಯ ಜನರು ಕೋರ್ಟ್ ಮೆಟ್ಟಿಲು ಏರುವುದು ಕಷ್ಟ ಆಗಬಹುದು ಅದಕ್ಕಾಗಿ ನೀವು ಸರಿಯಾದ ರಸ್ತೆ ಜನರಿಗೆ ಒದಗಿಸಿಕೊಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ. ಜೊತೆಗೆ ಬಿಬಿಎಂಪಿ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿ ವರ್ತಿಸುವಂತೆಯೂ ತಿಳಿಸಿದೆ.
ಹೈಕೋರ್ಟ್‌ನ ದಿ ವಿಷನ್ ಬೆಂಚ್ ಆಕ್ಟಿಂಗ್ ಚೀಫ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೇ ಬಿಬಿಎಂಪಿ ವಕೀಲರಿಗೆ, ನಿಮ್ಮ ಕಮಿಷನರ್‌ಗೆ ಸ್ವಲ್ಪ ಎಚ್ಚೆತ್ತುಕೊಳ್ಳಲು ಹೇಳಿ ಎಂದು ಹೇಳಿದ್ದಾರೆ. ಆಗ ಬಿಬಿಎಂಪಿ ವಕೀಲರು ಕೋರ್ಟ್‌ಗೆ ಬಿಬಿಎಂಪಿ ಇಲ್ಲಿಯವರೆಗೂ ಮುಚ್ಚಿರುವ ಗುಂಡಿಗಳ ಮಾಹಿತಿ ನೀಡಿದರು. "ನಾವು ಕೂಗಾಡದಿದ್ದರೆ ನಾವು ಗಂಭೀರವಾಗಿಲ್ಲ ಎಂದರ್ಥವಲ್ಲ'' ಎಂದು ನ್ಯಾಯಾಲಯವು ಬಿಬಿಎಂಪಿ ವಕೀಲರಿಗೆ ಎಚ್ಚರಿಕೆ ನೀಡಿತು.
ಪ್ರತಿದಿನ ತುಂಬುತ್ತಿರುವ ಗುಂಡಿಗಳ ಸಂಖ್ಯೆಯನ್ನು ನವೀಕರಿಸಲಾಗುತ್ತಿದ್ದು, ಒಟ್ಟು 2,010 ಗುಂಡಿಗಳು ತುಂಬಿದ್ದು, ಸೆಪ್ಟೆಂಬರ್‌ವರೆಗೆ ಕೇವಲ 221 ಗುಂಡಿಗಳು ಮಾತ್ರ ಉಳಿದಿವೆ ಎಂದು ಬಿಬಿಎಂಪಿ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ನಂತರ ಬಿಬಿಎಂಪಿಗೆ ವೆಬ್‌ಸೈಟ್ ಮೂಲಕ ಸಂಗ್ರಹಿಸಿದ ರಸ್ತೆ ಗುಂಡಿಗಳ ದೂರು ಎಷ್ಟರಮಟ್ಟಿಗೆ ಮುಚ್ಚಿದ್ದಾರೆ ಎಂದು ಪ್ರಶ್ನಿಸಿದರು. ಆದರೆ ಯಾವುದೇ ಸರಿಯಾದ ಮಾಹಿತಿ ಇಲ್ಲದ ಕಾರಣ ಬಿಬಿಎಂಪಿ ವಕೀಲರು ನ್ಯಾಯಮೂರ್ತಿಗಳ ಪ್ರಶ್ನೆಗೆ ತಡವರಿಸಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
20/09/2022 06:57 pm