ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯ ಹೆದ್ದಾರಿ ರಸ್ತೆ ಗುಂಡಿಗಳಲ್ಲಿ ರಾಗಿಪೈರು ನಾಟಿ ಮಾಡಿ ಪ್ರತಿಭಟನೆ

ಹೊಸಕೋಟೆ: ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರೊ ಭಾರಿ ಮಳೆಗೆ ಹೊಸಕೋಟೆ ಮಾಲೂರು ಹೆದ್ದಾರಿ IOC ಜಂಕ್ಷನ್ ಬಳಿ ಒಂದಡಿಗೂ ಆಳದ ರಸ್ತೆ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರು ತೀವ್ರವಾಗಿ ಪರದಾಡುದ್ದಾತ್ತಿರೆ. ಮುಖ್ಯರಸ್ತೆ ಮಧ್ಯದಲ್ಲಿ ಒಂದಡಿ ಆಳದ ಐದಾರು ಅಡಿ ಅಗಲದ ಗುಂಡಿಯಲ್ಲಿ ಹೋರಾಟಗಾರರು ರಾಗಿ ಪೈರು ನಾಟಿ ಮಾಡಿ ಪ್ರತಿಭಟಿಸಿ, ತಮ್ಮ ಅಸಮಾಧಾನ ಹೊರ ಹಾಕಿದರು.

ಹೊಸಕೋಟೆ ಮಾಲೂರು ಮದ್ಯೆ Indian Oil Corporation ಜಂಕ್ಷನ್ ಇದೆ. ಈ ಮಾರ್ಗವಾಗಿ ಪ್ರತಿದಿನ ಸಾವಿರಾರು ಪೆಟ್ರೋಲ್ ಟ್ಯಾಂಕರ್ಸ್ ಮತ್ತು ಗ್ಯಾಸ್ ಟ್ಯಾಂಕರ್ಸ್ ಹೋಗಿ ಬರುತ್ತವೆ. ಈ ಬೃಹತ್ ವಾಹನಗಳ ಸಂಚಾರದಿಂದ ರಾಜ್ಯ ಹೆದ್ದಾರಿಲಿ ಅಡಿಗಳಷ್ಟು ಅಗಲದ ಸಾವಿರಾರು ಗುಂಡಿ ನಿರ್ಮಾಣವಾಗಿವೆ. ವಾಹನ ಟ್ಯಾಕ್ಸ್ ಮತ್ತು ರಸ್ತೆ ಟ್ಯಾಕ್ಸ್ ಕಟ್ಟುವ ನಾಗರೀಕ‌ ಪರದಾಡ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಹಾಗು ಸಾರಿಗೆ ಇಲಾಖೆ ರಸ್ತೆ ನಿರ್ಮಾಣ, ನಿರ್ವಹಣೆ ಮಾಡದೆ ಕೈಕಟ್ಟಿ ಕುಳಿತಿದೆ. ಆದ್ದರಿಂದ ಹೋರಾಟಗಾರರು ರಸ್ತೆಗಿಳಿದು, ರಾಗಿ ಪೈರು ನಾಟಿ ಒತ್ತಡ ಹಾಕುತ್ತಿರುವುದು ಸಮಸ್ಯೆಗಿಡಿದ ಕೈಗನ್ನಡಿ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್.

Edited By : Somashekar
PublicNext

PublicNext

11/09/2022 09:49 pm

Cinque Terre

38.8 K

Cinque Terre

2

ಸಂಬಂಧಿತ ಸುದ್ದಿ