ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಬರ್ಲಿ, ಅತಿವೃಷ್ಟಿ- ಅನಾವೃಷ್ಟಿ ಅಷ್ಟೇ ಯಾಕೆ ಕೊರೊನಾ ಕಾಲದಲ್ಲೂ ಸೇವೆ ಸಲ್ಲಿಸಿದ್ದ ಸಿವಿಲ್ ಡಿಫೆನ್ಸ್ ಡಿಪಾರ್ಟ್ ಮೆಂಟ್ ನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ಯಾ ಅನ್ನೋ ಮಾತು ಕೇಳಿ ಬರ್ತಿದೆ.
ಫ್ಲಡ್ ಬಂದರೆ, ಮರ ಬಿದ್ದರೆ, ಕಟ್ಟಡ ಕುಸಿದರೆ ಇತ್ಯಾದಿ ಯಾವುದೇ ವಿಪತ್ತು ಬಂದಾಗ ನೆರವಾಗ್ತಿದ್ದ ಸಿವಿಲ್ ಡಿಫೆನ್ಸ್ ನ್ನು
ಕಳೆದ ಎರಡು ವರ್ಷದಿಂದ ಬಳಕೆ ಮಾಡಿಕೊಳ್ಳಲಾಗ್ತಿಲ್ಲ!
ಅಷ್ಟಕ್ಕೂ ಈಗಾಗಲೇ ಯಾರೂ ಯುನಿಫಾರ್ಮ್ ಕೂಡ ಹಾಕಬಾರದೆಂದು ಮೇಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿನಿತ್ಯ ನಡೆಸುತ್ತಿದ್ದ ಟ್ರೈನಿಂಗ್ ಗೂ ನಿರಾಸಕ್ತಿ ತೋರುತ್ತಿರುವ ಹಿರಿಯ ಅಧಿಕಾರಿಗಳ ವಿರುದ್ಧ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.
ಈ ಹಿಂದೆ ಹಲವಾರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಕೊಡಗು ಪ್ರವಾಹದಲ್ಲಿಯೂ ಪ್ರಾಣದ ಹಂಗು ತೊರೆದು ಜೀವಗಳನ್ನು ರಕ್ಷಿಸಿದ್ರು. ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಅವರಿಗೆ ತುಂಗಭದ್ರಾ ಪ್ರವಾಹದಲ್ಲಿ ಗಮನಾರ್ಹ ಕೆಲಸ ಮಾಡಿದ್ದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪದಕ ಕೂಡ ಲಭಿಸಿತ್ತು.
ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ನಡಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ನಗರ ಸೇರಿದಂತೆ ರಾಜ್ಯದ ಎಲ್ಲೇ ತುರ್ತು ಪರಿಸ್ಥಿತಿ ಸಂದರ್ಭ ರಕ್ಷಣಾ ಕಾರ್ಯದಲ್ಲಿ ತೊಡಗುತ್ತಿತ್ತು. ಆದರೆ, ಸದ್ಯ ಸಿವಿಲ್ ಡಿಫೆನ್ಸ್ ಡಿಪಾರ್ಟ್ ಮೆಂಟನ್ನೇ ನಿಷ್ಕ್ರಿಯಗೊಳಿಸಲಾಗಿದ್ಯಾ ಎಂಬ ಅನುಮಾನ ಮೂಡುತ್ತಿದೆ.
ಇದೀಗ ನಗರದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, ರಕ್ಷಣಾ ಕಾರ್ಯಕ್ಕಾಗಿ ನಿರಂತರ ಮೊರೆ ಕೇಳಿ ಬರುತ್ತಿದೆ.
ಆದರೆ, ಸಿವಿಲ್ ಡಿಫೆನ್ಸ್ ನಿಯೋಜನೆಗೆ ಮಾಡಲು ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ!
PublicNext
06/09/2022 03:08 pm