ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್....! ಅವೆನ್ಯೂ ರಸ್ತೆಯ ಬರ್ಕತ್ತು... ಇದು ಮಾಧ್ಯಮದ ತಾಕತ್ತು..!

ಪತ್ಯಕ್ಷ ವರದಿ- ಪ್ರವೀಣ್ ನಾರಾಯಣ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

ಬೆಂಗಳೂರು: ಸದಾ ಜನಪರವಾದ ವರದಿ, ಜನರ ಸಮಸ್ಯೆಗಳಿಗೆ, ಕಷ್ಟಗಳಿಗೆ ಸ್ಪಂದಿಸುವ ಪರಿಯಿಂದಾಗಿ ಜನಮನದಲ್ಲಿ ಮನ್ನಣೆಗೆ ಪಾತ್ರವಾಗಿರುವ ಪಬ್ಲಿಕ್ ನೆಕ್ಸ್ಟ್ ಇದೀಗ ತನ್ನ ಇನ್ನೊಂದು ವರದಿಯಿಂದಾಗಿ ಬೆಂಗಳೂರಿಗರ ಮೆಚ್ಚುಗೆಗೆ ಪಾತ್ರವಾಗಿದೆ...

ಹೌದು‌ ಬೆಂಗಳೂರಿನ ಹೃದಯ ಭಾಗದಂತಿರುವ ಅವೆನ್ಯೂ ರಸ್ತೆಯ ಅವ್ಯವಸ್ಥೆಯ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕಳೆದ 15 ದಿನಗಳ ಹಿಂದೆ ವರದಿಯೊಂದನ್ನು ಬಿತ್ತರ ಮಾಡಿತ್ತು.. ಸ್ಮಾಟ್೯ ಸಿಟಿ ಹೆಸರಿನಲ್ಲಿ ಅವೆನ್ಯೂ ರಸ್ತೆಯನ್ನು ಅಧ್ವಾನ ಮಾಡಿ ಹಾಕಿರುವ ಕುರಿತ ಪ್ರತ್ಯಕ್ಷವಾದ ಮತ್ತು ಪ್ರಬಲವಾದ ವರದಿಯನ್ನು ಮಾಡಿತ್ತು‌. ಆ ವರದಿಯನ್ನು ತಾವೆಲ್ಲಾ ನೋಡೇ ಇರ್ತಿರಿ..

ಅದರ ಸಾರಾಂಶ ಏನೆಂದರೆ ಕಳೆದ ಮೂರು ವರ್ಷಗಳಿಂದ ಅವೆನ್ಯೂ ರಸ್ತೆಯನ್ನು ಮುಚ್ಚಿ ಸ್ಮಾಟ್೯ ಸಿಟಿ ಹೆಸರಲ್ಲಿ ಕಳಪೆ ಗಾಮಗಾರಿ ನಡೆಸಲಾಗುತ್ತಿತ್ತು..‌ಕೇವಲ ಮೂರು ತಿಂಗಳಲ್ಲಿ ಕೆಲಸವನ್ನು ಪೂರೈಸುವುದಾಗಿ ಹೇಳಿದ್ದ ಅಧಿಕಾರಿಗಳು ಮೂರು ವರ್ಷವಾದರೂ ಕೆಲಸ ಕಂಪ್ಲೀಟ್ ಮಾಡಿರಲಿಲ್ಲ..

ಇದರಿಂದಾಗಿ ಬೆಂಗಳೂರಿನ ಅತ್ಯಂತ ಹಳೆಯರಸ್ತೆ ಮತ್ತು ಅತ್ಯಂತ ಪ್ರಮುಖ‌ ವ್ಯಾಪಾರಿ ಕೇಂದ್ರ ವಾಗಿರುವ ಅವೆನ್ಯೂ ರಸ್ತೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ಮೊದಲೇ ಎರಡು ವರ್ಷಗಳ ಕರೋನಾ ಹೊಡೆತದಿಂದ ತತ್ತರಿಸಿ ಹೋಗಿದ್ದ ವ್ಯಾಪಾರಸ್ಥರು. ಸ್ಮಾಟ್೯ ಸಿಟಿಯ ಹೊಡೆತದಿಂದ ಮತ್ತೆ ಕಂಗಾಲಾಗಿ ಹೋಗಿದ್ದರು.ಇಡೀ ರಸ್ತೆ ಉದ್ದಕ್ಕೂ ಧೂಳೇ ಧೂಳು..‌

ಮಳೆ ಬಂದರೆ ಕೆಸರು ಗದ್ದೆ.. ನಟ್ಟನಡುರಸ್ತೆಯಲ್ಲಿ ಬಲಿಗಾಗಿ ಕಾದಿದ್ದ ದೊಡ್ಡ ಹೊಂಡ..! ಪೈಪ್ ಅಳವಡಿಸಲು ತೋಡಿಟ್ಟ ಉದ್ದೂ ಅಗೆದು ಹಾಕಿದ್ದ ಪಾಯ..! ರಸ್ತೆಯ ನಟ್ಟನಡುವೆ ಬೀಡು ಬಿಟ್ಟಿದ್ದ ಬುಲ್ಡೋಜರ್ ..! ಅಕ್ಷರಶಃ ನರಕ ಸದೃಶ್ಯ ವಾತಾವರಣ...ಸಾರ್ವಜನಿಕರು ಅದೆಷ್ಟೇ ಮನವಿ ಮಾಡಿದ್ರೂ, ಗೋಳಾಡಿದ್ರೂ ಸ್ಮಾಟ್೯ ಸಿಟಿ ಪ್ರಾಜೆಕ್ಟ್ ಅಧಿಕಾರಿಗಳು ತಲೆನೇ ಕೆಡಿಸಿಕೊಳ್ಳುತ್ತಿರಲಿಲ್ಲ..

ಜನರ ನೋವಿಗೆ ಧ್ವನಿಯಾಗುವವರು ಯಾರೂ ಇರಲಿಲ್ಲ.. ಇಂತಹ ಸಂದರ್ಭದಲ್ಲಿ ಜನಾಗ್ರಹದ ಮೇರೆಗೆ ಅವೆನ್ಯೂ ರೋಡ್ ಗೆ ಎಂಟ್ರಿ ಕೊಟ್ಟಿದ್ದು ಪಬ್ಲಿಕ್ ನೆಕ್ಸ್ಟ್ ..ನಾವು ಸ್ಥಳಕ್ಕೆ ಭೇಟಿಕೊಟ್ಟಾಗ ಅಲ್ಲಿ ಕಂಡುಬಂದಿದ್ದು ನೂರಾರುಕೋಟಿ ರೂಪಾಯಿ ವೆಚ್ಚ ಮಾಡಿ ನಡೆಸ್ತಿರೋ ಬೇಕಾರ್ ಕಾಮಗಾರಿ..!

ಅನ್ಯಾಯ ಪ್ರಶ್ನಿಸಲು ಹೋದ ಜನರ ಮೇಲೆ ನಡೀತಿದ್ದ ಇಂಡರೆಕ್ಟ್ ದಾದಾಗಿರಿ..!

ಅಲ್ಲಿಗೆ ಹೋದಾಗ ಜನ ನೋವಿನಿಂದ ತಮ್ಮ ಅಳಲನ್ನು ನಮ್ಮಲ್ಲಿ ತೋಡಿಕೊಂಡರು.. ಪಬ್ಲಿಕ್ ನೆಕ್ಸ್ಟ್ ತನ್ನ ಎಂದಿನ ಖದರಿನೊಂದಿಗೆ, ಸತ್ಯಶೋಧನೆಗೆ ಇಳಿಯಿತು.. ಜನರ ಭಾವನೆಗಳಿಗೆ ಧ್ವನಿಯಾಯಿತು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬೇಜವಾಬ್ದಾರಿ ಅಧಿಕಾರಿಗಳನ್ನು ಬಿಟ್ಟೂ ಬಿಡದೆ ಕಾಡಿತು.. ಅವರನ್ನ ಸಂಪರ್ಕಿಸಿ ಸ್ಥಳಕ್ಕೆ ಕರೆಸಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿತು..

ಕಾಮಗಾರಿಯನ್ನು ಅತಿಶೀಘ್ರ ಪೂರೈಸುವಂತೆ ತಾಕೀತು ಮಾಡಿತು.. ಜನರ ಹೋರಾಟಕ್ಕೆ ಬೆಂಗಾವಲಾಗಿ ನಿಲ್ಲುವುದಾಗಿ ಎಚ್ಚರಿಕೆಯನ್ನೂ ಕೊಟ್ಟಿತು.. ಪರಿಣಾಮ..? ಪಬ್ಲಿಕ್ ನೆಕ್ಸ್ಟ್ ಕೊಟ್ಟ ಚಾಟಿ ಏಟಿಗೆ ಎಚ್ಚೆತ್ತ ಅಧಿಕಾರಿಗಳು ತಕ್ಷಣಕ್ಕೆ ಕಾರ್ಯಪ್ರವತ್ತರಾದರು.. ಹಗಲು ರಾತ್ರಿ ಕೆಲಸ ಮಾಡಿ ಒಂದೇ ವಾರದಲ್ಲಿ ಕಾಮಗಾರಿಯನ್ನು ಪೂರೈಸಿದ್ರು.. ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ರು..ಆಶ್ಚರ್ಯ...!

ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಾಮಗಾರಿ, ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಒಂದೇ ವಾರದಲ್ಲಿ ಕಂಪ್ಲೀಟ್ ಆಯಿತು.! ಜನಪರವಾದ ಪತ್ರಿಕೋದ್ಯಮದ ತಾಕತ್ತುಬಮತ್ತೊಮ್ಮೆ ಸಾಬೀತಾಯ್ತು..! ಪಬ್ಲಿಕ್ ನೆಕ್ಸ್ಟ್ ನ ಜನಪರವಾದ ಈ ಕಾರ್ಯಕ್ಕೆ ಪ್ರಶಂಸೆಯ ಮಾತುಗಳು ಎಲ್ಲೆಡೆಯಿಂದ‌ ಹರಿದುಬಂತು.. ಪಬ್ಲಿಕ್ ನೆಕ್ಸ್ಟ್ ನ ಧ್ಯೇಯ ಯಾವತ್ತಿಗೂ ಜನಪರವಾಗಿರುತ್ತದೆ..

ಜನರ ಕಷ್ಟಕ್ಕೆ ನೋವಿಗೆ ಸ್ಪಂದನೆಯೇ ನಮಗೆ ಫಸ್ಟ್ ಉಳಿದದ್ದೆಲ್ಲಾ.. ನೆಕ್ಸ್ಟ್ ಎಂಬ ಧ್ಯೇಯ ವಾಕ್ಯದೊಂದಿಗೆ

Edited By : Somashekar
PublicNext

PublicNext

17/08/2022 08:39 pm

Cinque Terre

36.51 K

Cinque Terre

5

ಸಂಬಂಧಿತ ಸುದ್ದಿ