ಬೆಂಗಳೂರು: ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡ್‌ನಲ್ಲಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಮಾರುತಿ ನಗರದ ಕ್ಯಾಷಿಯರ್ ಲೇಔಟ್‌ನಲ್ಲಿ ಕೂಡ ರಸ್ತೆಗಳಲ್ಲಿ ನೀರು ನಿಲ್ಲಲು ಕಾರಣವಾಗಿತ್ತು. ಮೋರಿಗೆ ಮಳೆ ನೀರು ಹೋಗುವ ಜಾಗದಲ್ಲಿ ಕಸ ತುಂಬಿದ ಕಾರಣ ನೀರು ಹೋಗಲು ಸಾಧ್ಯವಾಗದೆ ರಸ್ತೆಗಳು ಜಲಾವೃತಗೊಂಡಿತ್ತು.
ಮಳೆ ನೀರಿನಿಂದ ಪರದಾಡುತ್ತಿದ್ದ ನಿವಾಸಿಗಳು ಮಡಿವಾಳ ವಾರ್ಡ್ ಮಾಜಿ ಕಾರ್ಪೊರೇಟರ್ ಆದ ಮಂಜುನಾಥ ರೆಡ್ಡಿ ಅವರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಮಂಜುನಾಥರೆಡ್ಡಿ ಕೂಡಲೇ ಬಿಬಿಎಂಪಿ ಸಿಬ್ಬಂದಿಯನ್ನು ಕರಿಸಿ ಮಳೆ ನೀರು ಹೋಗುವ ಜಾಗದಲ್ಲಿ ತುಂಬಿದ್ದ ಕಸವನ್ನು ತಾವೇ ಖುದ್ದಾಗಿ ಕಸ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು.
ಬೊಮ್ಮನಹಳ್ಳಿಯಲ್ಲಿ ರಾಜಕಾಲುವೆಯ ಕಾಮಗಾರಿ ಮಾಡುತ್ತಿದ್ದು ಆದ್ದರಿಂದ ಮಡಿವಾಳದಲ್ಲಿ ರಾಜಕಾಲುವೆ ಉಕ್ಕಿ ಹರಿದಿದ್ದು ಇದರಿಂದ ಮಳೆ ಬಂದರೆ ಸಾಕು ರಸ್ತೆಗಳು ತುಂಬಿ ಹೋಗುತ್ತದೆ ಎಂದು ಸ್ಥಳೀಯರು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಉಪಯೋಗ ಆಗಿಲ್ಲವಂತೆ.
ಇಂದು ವಾರ್ಡ್‌ನ ಮೋರಿಗಳಲ್ಲಿ ಮಳೆ ನೀರು ಹೋಗುವ ಜಾಗದಲ್ಲಿ ತುಂಬಿದ್ದ ಕಸ ಮತ್ತು ಮಣ್ಣನ್ನು ತೆಗೆಯುವ ಕಾರ್ಯದಲ್ಲಿ ಬಿಬಿಎಂಪಿ ಸಿಬ್ಬಂದಿ ನಿರತರಾಗಿದ್ದಾರೆ. ಮಂಜುನಾಥರೆಡ್ಡಿ ಕಾರ್ಯಕ್ಕೆ ವಾರ್ಡ್ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಪ್ರತಿ ವಾರ್ಡ್ ನಲ್ಲಿ ಇವರಂತೆ ಎಲ್ಲ ಜನಪ್ರತಿನಿಧಿಗಳು ಕೆಲಸ ಮಾಡಿಬಿಟ್ಟರೆ ಬೆಂಗಳೂರಿನಲ್ಲಿ ಸಮಸ್ಯೆಗಳೇ ಇಲ್ಲದಂತಾಗಿ ಬಿಡುವುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
02/08/2022 10:26 am