ಬೆಂಗಳೂರು: ಧೂಳು.. ಧೂಳು... ಧೂಳು...ಈ ರಸ್ತೆಯಲ್ಲಿ ವಾಹನ ಸವಾರರು ಮಂಜಿನ ರೀತಿಯಲ್ಲಿ ತುಂಬಿರುವ ಧೂಳಿನಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಈ ಅವಾಂತರಕ್ಕೆ ಕಾರಣವಾಗಿದ್ದು, ಬಿಡಬ್ಲ್ಯೂಎಸ್ಎಸ್ಬಿ ಮಾಡುತ್ತಿರುವ ಕಾಮಗಾರಿ. ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಕಾಮಗಾರಿಗಾಗಿ ಭೂಮಿಯಿಂದ ಅಗೆದ ಮಣ್ಣನ್ನು ರಸ್ತೆಯ ಬದಿಯಲ್ಲೇ ಹಾಕಿರುವ ಕಾರಣ ಇಲ್ಲಿ ಓಡಾಡುವ ವಾಹನಗಳಿಂದ ಧೂಳು ಎದ್ದು ರಸ್ತೆಯೇ ಕಾಣದಂತಾಗಿದೆ.
ಇದು ಗೊಟ್ಟಿಗೆರೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವಂತಹ ರಸ್ತೆ. ಇಲ್ಲಿನ ಸೆಂಟ್ ಮೇರಿ ಸ್ಕೂಲ್ ಬಳಿ ಬಿಡಬ್ಲ್ಯೂಎಸ್ಎಸ್ಬಿ ಮಾಡುತ್ತಿರುವ ಕಾಮಗಾರಿಯಿಂದ ವಿಪರೀತ ಧೂಳಾಗುತ್ತಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಅದರಲ್ಲೂ ಬಿಡಬ್ಲ್ಯೂಎಸ್ಎಸ್ಬಿ ರಸ್ತೆ ಅಗೆದಿರುವ ಸ್ಥಳದಲ್ಲಿ ಬರೀ ಬ್ಯಾರಿಕೇಡ್ ಹಾಕಿ ಬಿಟ್ಟಿದ್ದಾರೆ. ಈ ರಸ್ತೆ ಮೇಲೆ ಯಾವುದೇ ಸ್ಟ್ರೀಟ್ ಲೈಟ್ ಇಲ್ಲದ ಕಾರಣ ದೂರದಿಂದ ಅಗೆದಿರುವ ಗುಂಡಿ ಕಾಣುವುದೇ ಇಲ್ಲ.
ಆದಷ್ಟು ಬೇಗ ಕಾಮಗಾರಿ ಮುಗಿಸಿ ರಸ್ತೆ ಮೇಲೆ ಸಂಚಾರ ಮಾಡುವ ವಾಹನ ಸವಾರರಿಗೆ ಧೂಳಿನಿಂದ ಮುಕ್ತಿ ನೀಡಬೇಕು ಮತ್ತು ಅಗೆದಿರುವ ಸ್ಥಳದಲ್ಲಿ ರಿಫ್ಲೆಕ್ಟರ್ ಲೈಟ್ ಗಳನ್ನು ಹಾಕಿ ಅಮಾಯಕ ಜೀವ ಬಲಿ ಆಗುವ ಮುನ್ನ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು.
ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
28/07/2022 02:12 pm