ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ

ಬೆಂಗಳುರು: ಸಿಲಿಕಾನ್ ಸಿಟಿಯ ಈ ಮುಖ್ಯ ರಸ್ತೆಯ ಮೇಲೆ ಜನರು ಓಡಾಡುವಾಗ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಸ್ಥಳೀಯ ನಿವಾಸಿಗಳು ಮತ್ತು ಬಿಬಿಎಂಪಿಯವರು ಸೇರಿ ಕಸದಿಂದ ತುಂಬಿದ್ದ ರಸ್ತೆಯನ್ನು ಸ್ವಚ್ಛಗೊಳಿಸಿ ಪೇಂಟ್ ಮಾಡಿ ಸುಂದರ ಸ್ಥಳವಾಗಿ ಮಾರ್ಪಡಿಸಿದ್ದರು. ಆದರೆ ಬಿಬಿಎಂಪಿ ನಿರ್ಲಕ್ಷದಿಂದ ಕೆಲವೇ ದಿನಗಳಲ್ಲಿ ಆ ಸ್ಥಳ ಮತ್ತೆ ಮುಂಚಿನಂತೆಯೇ ಕೊಳಚೆಯಾಗಿತ್ತು

ಅಂದು ರಿಯಾಲಿಟಿ ಚೆಕ್ ನಡೆಸಿದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸ್ಥಳದಲ್ಲಿಯೇ ಯಾವ ರೀತಿ ಜನ ಬಂದು ರಾತ್ರಿ ವೇಳೆ ಕಸ ಹಾಕಿ ಹೋಗುತ್ತಿದ್ದರು ಎನ್ನುವ ಬಗ್ಗೆ ವರದಿ ಮಾಡಿತ್ತು. ವರದಿ ನೋಡಿ ಕೂಡಲೆ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಈಗ ಕಸದ ಸ್ಪಾಟ್ನಲ್ಲಿ ಬಟ್ಟೆ ಕಟ್ಟಿ ಸಂಪೂರ್ಣವಾಗಿ ಸ್ಥಳವನ್ನು ಮುಚ್ಚಿದ್ದಾರೆ. ಇದರಿಂದ ಈಗ ಇಲ್ಲಿ ಓಡಾಡುವ ಜನ ಕಸದಿಂದ ಮುಕ್ತಿ ಪಡೆದಿದ್ದಾರೆ.

Edited By : Somashekar
Kshetra Samachara

Kshetra Samachara

09/06/2022 06:20 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ