ದೇವಸ್ಥಾನದ ಕಂಬಗಳು ಅರ್ಧಕ್ಕೆ ನಿಂತಿರುವ ದೃಶ್ಯ ಒಂದುಕಡೆಯಾದರೆ ದೇವಸ್ಥಾನದ ಗೋಪುರ ಕೂಡ ಅರ್ಧ ಕಾಮಗಾರಿಗೆ ನಿಂತುಹೋಗಿದೆ.200 ವರ್ಷಗಳ ಹಿಂದೆ ಜೋಡಿದಾರರು ಕಟ್ಟಿದ ದೇವಸ್ಥಾನದ ಸ್ಥಿತಿ ಈಗ ಹೇಗಾಗಿದೆ ಎನ್ನುವುದನ್ನು ಈ ಸ್ಟೋರಿ ಹೇಳತ್ತೆ ಕೇಳಿ
ಸುಂದರವಾಗಿ ಮೂಡಿಬರಬೇಕಾದ ದೇವಸ್ಥಾನದ ಕಾಮಗಾರಿ ವರ್ಷಗಟ್ಟಲೆ ನಿಂತು ಹೋಗಿದೆ. ಇದು ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಜೋಡಿದಾರರು 200 ವರ್ಷಗಳ ಹಿಂದೆ ಕಟ್ಟಿದ ದೇವಸ್ಥಾನ. ಈ ಚಿಕ್ಕದಾಗಿದ್ದ ದೇವಸ್ಥಾನವನ್ನು ಅಭಿವೃದ್ಧಿ ಮಾಡಲು ಇದೇ ಊರಿನ ನಿವಾಸಿ ಆಧಾರ್ ಜಗದೀಶ್ ಗೌಡ ಮತ್ತು ಅವರ ಕುಟುಂಬ ದೇವಸ್ಥಾನ ಕಾಮಗಾರಿ ಶುರು ಮಾಡಿದರು. ಆದರೆ ಹಣದ ಅಭಾವವಾಗಿ ದೇವಸ್ಥಾನದ ಕಾಮಗಾರಿ ಹಾಗೆ ನಿಂತು ಹೋಗಿದೆ.
ಮುಜರಾಯಿ ಇಲಾಖೆ ಅಥವಾ ಸರ್ಕಾರದಿಂದ ಯಾವುದೇ ರೀತಿಯ ಹಣ ಸಹಾಯ ಪಡೆಯದೇ ಇವರು ಮತ್ತು ಇವರ ಕುಟುಂಬ ದೇವಸ್ಥಾನದ ಕಾಮಗಾರಿ ಮಾಡುತ್ತಿದ್ದಾರೆ.
ಇಲ್ಲಿಯವರೆಗೂ 2 ಕೋಟಿ ರೂಪಾಯಿ ನೂತನವಾದ ದೇವಸ್ಥಾನ ಕಟ್ಟಲು ಖರ್ಚು ಮಾಡಿದ್ದಾರೆ ಇನ್ನು ದೇವಸ್ಥಾನವನ್ನು ಸಂಪೂರ್ಣವಾಗಿ ಕಟ್ಟಿ ಮುಗಿಸಲು ಇನ್ನು 6 ಕೋಟಿ ರೂಪಾಯಿ ವೆಚ್ಚ ಬೀಳಬಹುದೆಂದು ಜಗದೀಶ್ ಹೇಳುತ್ತಿದ್ದಾರೆ.
ಆದಷ್ಟು ಬೇಗ ಈ ದೇವಸ್ಥಾನ ಕಾಮಗಾರಿ ಶುರುವಾಗಿ ಕಾಮಗಾರಿ ಮುಗಿದರೆ ದಕ್ಷಿಣ ಬೆಂಗಳೂರಿನಲ್ಲಿ ಅದ್ಭುತವಾಗಿ ಮೂಡಿ ಬರುವ ದೇವಸ್ಥಾನ ಇದಾಗಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
17/06/2022 09:04 pm