ಆನೇಕಲ್: ಶಾಲೆ ಆವರಣ ಹಾಗೂ ಸರ್ಕಾರಿ ಕಚೇರಿಗಳ ಸುತ್ತಮುತ್ತಲಿನ 100 ಮೀಟರ್ ಅಂತರದಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿಗಳನ್ನು ತೆರೆಯುವಂತಿಲ್ಲ ಅಂತ ಸರ್ಕಾರ ಆದೇಶವಿದೆ. ಆದರೆ ಇಲ್ಲೊಂದು ಕಡೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ನಾಯಿಕೊಡೆಯಂತೆ ಮದ್ಯದಂಗಡಿ ಅಕ್ರಮವಾಗಿ ತಲೆ ಎತ್ತಿದೆ. ಅದರಲ್ಲೂ ಶಾಲೆ ಮಕ್ಕಳು ಕೈಮುಗುದು ಶಾಲೆಗೆ ಹೋಗುವ ಬದಲು ಮದ್ಯದಂಗಡಿಗೆ ಕೈಮುಗುದು ಹೋಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಊರಿನ ಗ್ರಾಮಸ್ಥರು ಈ ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಹೌದು. ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯ ತಿರುಪಾಳ್ಯ ಸೂರ್ಯೋದಯ ಸಮೂಹ ವಿದ್ಯಾಸಂಸ್ಥೆ ಸುಮಾರು ಹತ್ತಾರು ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ. ಶಾಲೆಯ ಮೈದಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಬಾರ್ ಅನ್ನು ನೂತನವಾಗಿ ತೆರೆಯಲಾಗಿದೆ. ಇನ್ನು ಶಾಲೆ ಮೈದಾನಕ್ಕೆ ಹೊಂದುಕೊಂಡಂತೆ ಮದ್ಯದಂಗಡಿ ಇರೋದ್ರಿಂದ ಶಾಲಾ ಮಕ್ಕಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಇದನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಸೂರ್ಯೋದಯ ಸಮೂಹ ಶಿಕ್ಷಣ ಸಂಸ್ಥೆಯ ಮಾಲೀಕರು ಕೃಷ್ಣ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಆದೇಶವಿದ್ದರೂ ನೆಪ ಮಾತ್ರಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹಣದಾಸೆಗೆ ಶಾಲೆಯ ಪಕ್ಕದಲ್ಲೇ ಬಾರ್ ತೆಗೆಯಲು ಅನುಮತಿ ಕೊಟ್ಟಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
22/03/2022 09:34 pm