ಆನೇಕಲ್: ಶಾಲಾ ಮಕ್ಕಳು ತಿನ್ನುವ ಆಹಾರ ಪದಾರ್ಥದಲ್ಲಿ ಹುಳುಗಳು ಕಾಣಿಸಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಬ್ ಮಂಗಳ ವೆಂಕಟೇಶ್ವರ ಶಾಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಬಗ್ಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯನ್ನು ವೀಣಾ ಎಂಬವರನ್ನು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರವನ್ನು ನೀಡಿದರು. ಅದಲ್ಲದೆ ಈ ಬಾರಿ ಅಡ್ಜಸ್ಟ್ ಮಾಡಿಕೊಳ್ಳುವಂತೆ ಶಾಲೆ ಸಿಬ್ಬಂದಿಗಳಿಗೆ ತಾಕಿತು ಮಾಡುತ್ತಿದ್ದಾರಂತೆ.
ಇನ್ನು ಆನೇಕಲ್‌ದ್ಯಾಂತ ಅಕ್ಷರ ದಾಸೋಹ ಶಾಲೆಗಳ ಪೈಕಿ 300ಕ್ಕೂ ಹೆಚ್ಚು ಶಾಲಗಳನ್ನು ಒಳಗೊಂಡಿದ್ದು ಆನೇಕಲ್ ತಾಲೂಕಿನ ರಾಮಕೃಷ್ಣಾಪುರ ಗೋರ್ಡನ್ ಬಳಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿದ್ದು ಅಲ್ಲಿಂದ ಎಲ್ಲಾ ಶಾಲೆಗಳಿಗೂ ರವಾನೆ ಮಾಡಲಾಗುತ್ತಂತೆ.
ಇನ್ನು ಹುಳು ಇರುವ ಆಹಾರ ಪದಾರ್ಥಗಳನ್ನು ಬದಲಿಸಿಕೊಡದೆ ನೀರಲ್ಲಿ ನೆನಸಿ ಒಣಗಿಸಿ ಉಪಯೋಗಿಸುವಂತೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾ ಸೂಚನೆ ನೀಡಿದರಂತೆ. ಇನ್ನು ಶಾಲೆಯಲ್ಲಿ ಆಹಾರ ಪದಾರ್ಥಗಳಲ್ಲಿ ಹುಳು ಇದೆ ಇಲಾಖೆಗೆ ಮೌಖಿಕವಾಗಿ ದೂರು ನೀಡಿ ಸ್ಥಳಕ್ಕೆ ಭೇಟಿ ಕೊಡುವಂತೆ ಹೇಳಿದ್ರೆ, ಅಧಿಕಾರಿ ತುಂಬಾ ಬ್ಯುಸಿ ಇದ್ದೇನೆ ಅಂತ ಹೇಳಿ ಸಮಸ್ಯೆ ಇರುವ ಕಡೆ ಬಾರದೆ ಆಹಾರ ಪದಾರ್ಥಗಳೇ ಕೊಡದ ಶಾಲೆಗೆ ಭೇಟಿ ಕೊಟ್ಟು ಕಾಲ ಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇನ್ನಾದ್ರೂ ಎಚ್ಚೆತ್ತು ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಅನ್ನೋದೇ ನಮ್ಮ ಆಶಯ
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
27/09/2022 07:02 pm