ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ಲಪ್ತ ಸಮಯಕ್ಕೆ ಬರುತ್ತಿಲ್ಲ ವೈದ್ಯರು!; ಬಡರೋಗಿಗಳ ಪಡಿಪಾಟಲು

ಆನೇಕಲ್: ಆನೇಕಲ್ ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು, ಹೆಸರಿಗೆ ಮಾತ್ರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ. 100 ಬೆಡ್ ವ್ಯವಸ್ಥೆ ಇರುವ ಆಸ್ಪತ್ರೆಯ ವೈದ್ಯರು ಮಾತ್ರ ಕ್ಲಪ್ತ ಸಮಯಕ್ಕೆ ಬರುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.

ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ವೈದ್ಯರ ಬರುವಿಕೆಗಾಗಿ ಗಂಟೆಗಟ್ಟಳೆ ಕಾಯುತ್ತಿರುವ ಬಡಪಾಯಿ ರೋಗಿಗಳ ವೀಡಿಯೊ ಮಾಡಿ 'ಪಬ್ಲಿಕ್ ನೆಕ್ಸ್ಟ್' ಗೆ ಕಳಿಸಿಕೊಟ್ಟಿದ್ದಾರೆ.

ಸುಮಾರು 50 ಹಳ್ಳಿಗಳಿಗೆ ಇರುವ ಏಕೈಕ ಸರ್ಕಾರಿ ಆಸ್ಪತ್ರೆ ಇದಾಗಿದೆ. ಆದರೆ, ವೈದ್ಯ ಮಹಾಶಯರೇ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದೆ ಕೈ ಕೊಡುತ್ತಿರುವುದು ದುರಂತ ಸರಿ!

Edited By : Shivu K
PublicNext

PublicNext

27/03/2022 03:08 pm

Cinque Terre

32.75 K

Cinque Terre

1

ಸಂಬಂಧಿತ ಸುದ್ದಿ