ಬೆಂಗಳೂರು: ರಾಜಾಜಿನಗರ ವಾರ್ಡ್-99ರಲ್ಲಿ ಪರಿಸರ ಜಾಗೃತಿ ಅಭಿಯಾನ ಮತ್ತು ಮನೆಗಳಿಗೆ ಹಸಿ ಕಸ ಒಣ ಕಸ ಸಂಗ್ರಹಿಸಲು 30,000 ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ ನಡೆದಿದೆ.
ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿರವರು ರಾಜಾಜಿನಗರ ವಾರ್ಡ್ನನ ಮಂಜುನಾಥನಗರದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಡಸ್ಟ್ ಬಿನ್ ಗಳನ್ನು ವಿತರಿಸಿದ್ರು, ಸ್ವಯಂ ಸೇವಕರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸ್ಥಳೀಯರು ಪಾಲ್ಗೊಂಡಿದ್ದರು. ಪರಿಸರ ಜಾಗೃತಿ ಅಭಿಯಾನ ಮತ್ತು ಹಸಿ ಕಸ, ಒಣ ಕಸ ಸಂಗ್ರಹಿಸಿ ಮನೆ ಮುಂದೆ ಬರುವ ಕಸ ಸಂಗ್ರಹಿಸುವವರಿಗೆ ನೀಡಲು ವಾರ್ಡ್ ಪ್ರತಿ ಮನೆ ಎರಡು ಡಸ್ಟ್ ಬಿನ್ ಪ್ಲಾಸ್ಟಿಕ್ ಡಬ್ಬಿಗಳನ್ನು ವಿತರಿಸಲಾಗುತ್ತಿದೆ.
ಸಾರ್ವಜನಿಕರು ಹಸಿ ಕಸ ಗೊಬ್ಬರ ತಯಾರಿಕೆ ಮತ್ತು ಒಣ ಕಸ ಮರು ಬಳಕೆ ಮಾಡಬಹುದು ಹಾಗೂ ಪರಿಸರ ಸಹ ಸ್ವಚ್ಚತೆಯಿಂದ ಕೊಡಿರುತ್ತದೆ.ಪರಿಸರ ಹಾಳದರೆ,ರೋಗರುಜಿನಗಳು ಹೆಚ್ಚಾಗುತ್ತದೆ ಅದರಿಂದ ಸಾರ್ವಜನಿಕರು ಹಸಿ ಕಸ,ಒಣ ಕಸ ವಿಂಗಡನೆ ಪರಿಸರ ಉಳಿಸಿ ಎಂದು ಮನೆಗಳಿಗೆ ಭೇಟಿ ನೀಡಿ ಮನವಿ ಮಾಡಲಾಗುತ್ತಿದೆ.ಇಂದಿರಾನಗರ ,ಮಂಜುನಾಥನಗರದಲ್ಲಿ ಈಗಾಗಲೇ ವಿತರಿಸುವ ಕಾರ್ಯ ನಡೆಯುತ್ತಿದೆ.
Kshetra Samachara
22/06/2022 04:07 pm