ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕದಲ್ಲಿ ನ್ಯೂರೋ, ಸ್ಪೈನ್, ಸೈಕ್ರಿಯಾಟರಿ ಸಮಸ್ಯೆಗಳಿಗೆ ಉಚಿತ ಆರೋಗ್ಯ ಶಿಬಿರ

ಬೆಂಗಳೂರು : ಕೊರೊನಾ ನಂತರ ಹೆಚ್ಚುತ್ತಿರುವ ನರರೋಗ, ಬೆನ್ನೆಲುಬು, ಮಾನಸಿಕ ರೋಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಿ ಸಾರ್ವಜನಿಕರ ಆರೋಗ್ಯ, ಜೀವನ ಸುಧಾರಿಸುವ ನಿಟ್ಟಿನಲ್ಲಿ ಇದೇ ಜೂನ್ 19ರ ಭಾನುವಾರ ಯಲಹಂಕದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.

ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರನ್ನ ಉದ್ದೇಶಿಸಿ ಮಾತನಾಡಿದ ನವಚೇತನ ಆಸ್ಪತ್ರೆ ಡಾ.ಗಿರೀಶ್ ಚಂದ್ರ,ಯಲಹಂಕದ ನವಚೇತನ ಆಸ್ಪತ್ರೆ ಮತ್ತು ಬೆಂಗಳೂರು ನ್ಯೂರೋ ಸೆಂಟರ್ ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಯಲಹಂಕ & ಬೆಂಗಳೂರು ಸುತ್ತಮುತ್ತಲಿನ ಜನ ಈ ಉಚಿತ ಆರೋಗ್ಯ ಶಿಬಿರದ ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.

ಭಾನುವಾರ ಬೆಳಗ್ಗೆ 9.30 ರಿಂದ 2ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಬೆಂಗಳೂರು ನ್ಯೂರೋ ಸೆಂಟರ್ ನ ನ್ಯೂರಾಲಜಿಸ್ಟ್ ಡಾ.ಆರ್.ಉಮಾಶಂಕರ್ ಸೇರಿ ಎರಡೂ ಆಸ್ಪತ್ರೆಗಳ ಹೆಸರಾಂತ ತಜ್ಞ ವೈದ್ಯರು ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ತಲೆನೋವು, ದೌರ್ಬಲ್ಯ ಅಥವಾ ನಿಶ್ಯಕ್ತಿ, ಬೆನ್ನು, ಕುತ್ತಿಗೆ ನೋವು, ತಲೆತಿರುಗುವಿಕೆ, ಮೂರ್ಛೆರೋಗ ಸ್ಪರ್ಶ ಸಂವೇಧನೆ ಕೊರತೆ, ನೆನಪಿನಶಕ್ತಿ ಸಮಸ್ಯೆ, ನಿದ್ರೆಸಮಸ್ಯೆ, ಬೇಸರ ಹಾಗೂ ಖಿನ್ನತೆ, ಇನ್ನಿತರ ನರರೋಗ, ಬೆನ್ನುಲುಬುನೋವು, ಮಾನಸಿಕ ರೋಗಗಳಿಗೆ ಉಚಿತ ಸಂದರ್ಶನ ನೀಡಲಾಗುತ್ತದೆ.

ಕೊರೊನಾ ನಂತರ ಆದಂತ ಆರೋಗ್ಯ ಸಮಸ್ಯೆ ಒಂದೆರಡಲ್ಲ, ಕೋವಿಡ್ ನಿಂದಾಗಿ ಅನೇಕ ಕುಟುಂಬಗಳೇ ಬೀದಿ ಪಾಲಾಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನವಚೇತನ ಆಸ್ಪತ್ರೆ & ಬೆಂಗಳೂರು ನ್ಯೂರೋ ಸೆಂಟರ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ.

Edited By : Somashekar
Kshetra Samachara

Kshetra Samachara

14/06/2022 07:33 pm

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ