ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀಕೆಂಡ್ ಕರ್ಫ್ಯೂ ವಿರೋಧಿಸಿ ನಾಳೆ ವಿವಿಧ ಸಂಘ-ಸಂಸ್ಥೆಗಳ ಮಹತ್ವದ ಸಭೆ

ಬೆಂಗಳೂರು: ವೀಕೆಂಡ್ ಕರ್ಫ್ಯೂ ವಿರೋಧಿಸಿ ವಿವಿಧ ಉದ್ಯಮಗಳ ಸಂಘಟನೆಗಳು ನಾಳೆ ಮಹತ್ವದ ಸಭೆ ನಡೆಸಲು ಮುಂದಾಗಿವೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್, ಬಾರ್, ಪಬ್ & ರೆಸ್ಟೋರೆಂಟ್ ಸಂಘ, ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್, ಜಿಮ್, ಸ್ವಿಮ್ಮಿಂಗ್ ಪೂಲ್ ಮಾಲೀಕರು ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನ ವೈಟ್ ಪೆಟಲ್ಸ್ ನಲ್ಲಿ ಸಭೆ ನಡೆಸಲಿದ್ದಾರೆ. ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಶುಕ್ರವಾರದವರೆಗೆ ಕಾದು ನೋಡೋಣ ಎಂದು ಸರ್ಕಾರ ಸುಮ್ಮನಾಗಿದೆ. ಹೀಗಾಗಿ ವಿವಿಧ ಉದ್ಯಮಗಳಿಗೆ ಶುಕ್ರವಾರದವರೆಗೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ವಿರೋಧಕ್ಕೆ ಕಾರಣವೇನು?

-ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆಯಿಂದ ಲಾಸ್

– ಊಟದ ಮೊತ್ತಕ್ಕಿಂತ ಪಾರ್ಸೆಲ್ ಸಾಮಾಗ್ರಿಗಳ ಬೆಲೆಯೇ ದುಬಾರಿ

– ವಾರದ 7 ದಿನವೂ ಮಹಾರಾಷ್ಟ್ರದಂತೆ ರೂಲ್ಸ್ ಮಾಡಿ

– ಮಹಾರಾಷ್ಟ್ರದಲ್ಲಿ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ

– ವಾರದ 7 ದಿನವೂ ಸಹ 50:50 ರೂಲ್ಸ್ ಮಹಾರಾಷ್ಟ್ರದಲ್ಲಿದೆ

– ಇದೇ ನಿಯಮವನ್ನ ಕರ್ನಾಟಕದಲ್ಲೂ ಜಾರಿಗೆ ತನ್ನಿ ಎಂದು ಹೋಟೆಲ್ ಅಸೋಸಿಯೇಷನ್ ಮನವಿ ಇಟ್ಟಿದೆ.

ಬಾರ್ & ರೆಸ್ಟೊರೆಂಟ್ ನವರು ಅವರು ಹೇಳಿದ್ದೇನು?

– ವೀಕೆಂಡ್ ಕರ್ಫ್ಯೂ ತೆರವು ಮಾಡಿ, ಪಾರ್ಸಲ್ ಗೆ ಅನುಮತಿ ನೀಡಿ

– ಇಲ್ಲವಾದ್ರೆ, ಒಂದು ಸಮಯ ನಿಗದಿ ಮಾಡಿ

– ನಿಗದಿತ ಸಮಯದವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ

– ವಾರದ 7 ದಿನವೂ ಕೇವಲ ನೈಟ್ ಕರ್ಫ್ಯೂ ಇರಲಿ

– ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ

ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್ ಹೇಳಿದ್ದೇನು?

– ಮದುವೆ, ಸಮಾರಂಭಗಳಿಗೆ ಹೇರಿರುವ 100 ಜನರ ಮಿತಿ ವಾಪಾಸ್ ಪಡೆಯಿರಿ

– ಶೇ.50ರಷ್ಟು ಜನರ ಮಿತಿ ಅನುಮತಿ ನೀಡಿ

– ಕಲ್ಯಾಣ ಮಂಟಪಗಳ ಗಾತ್ರಕ್ಕೆ ಅನುಗುಣವಾಗಿ ಅವಕಾಶ ಕೊಡಿ

ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಏನು ಹೇಳುತ್ತೆ?

– ವೀಕೆಂಡ್ ಕರ್ಫ್ಯೂ ಕಂಪ್ಲೀಟ್ ಕ್ಯಾನ್ಸಲ್ ಮಾಡಿ

– ಆನ್ ಲೈನ್ ನಂತೆಯೇ ನಮಗೂ ವ್ಯಾಪಾರಕ್ಕೆ ಅವಕಾಶ ಕೊಡಿ

– ಮೊಬೈಲ್, ಲ್ಯಾಪ್ ಟಾಪ್ ರಿಪೇರಿಗಳು ವಾರಾಂತ್ಯಕ್ಕೆ ಹೆಚ್ಚಿನ ವ್ಯಾಪಾರ

–ವರ್ಕ್ ಫ್ರಂ ನಿಂದ ಸರ್ವಿಸ್ ಸೆಂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚು

ಸ್ವಿಮ್ಮಿಂಗ್ ಫುಲ್ & ಜಿಮ್ ಮಾಲೀಕರ ಮನವಿ ಏನು?

– ವಾರದ 7 ದಿನವೂ ಶೇ.50 ರಷ್ಟು ಜನರಿಗೆ ಅವಕಾಶ ಕೊಡಿ

– ಬ್ಯಾಚ್ ಗಳ ರೀತಿ ಸ್ವಮ್ಮಿಂಗ್ & ಜಿಮ್ ಗಳಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ.

Edited By : Nirmala Aralikatti
Kshetra Samachara

Kshetra Samachara

18/01/2022 12:29 pm

Cinque Terre

798

Cinque Terre

0

ಸಂಬಂಧಿತ ಸುದ್ದಿ