ಬೆಂಗಳೂರು: ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಉತ್ತೇಜನಕ್ಕೆ FAME ( Faster Adoption Manufacturing of (Hybrid and) Electric Vehicles) ಯೋಜನೆ ಅಡಿಯಲ್ಲಿ, ಹೆಚ್ಚುವರಿ ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಧ್ಯನವಾದ ತಿಳಿಸಿದ ಸಂಸದ ತೇಜಸ್ವಿಸೂರ್ಯ, ಸಿಲ್ಕ್ ಬೋರ್ಡ್‌ನಿಂದ ಮಾರತ್ ಹಳ್ಳಿವರೆಗೆ ಬಿಎಂಟಿಸಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಂಡರು.
ಫೇಮ್ʼ ಯೋಜನೆ ಅಡಿಯಲ್ಲಿ ಬೆಂಗಳೂರು ನಗರಕ್ಕೆ 921( ಟಾಟಾ ಕಂಪನಿ), 300 (ಸ್ವಿಚ್ ಮೊಬಿಲಿಟಿ ಕಂಪನಿ) ಇಲೆಕ್ಟ್ರಿಕ್ -ಬಸ್‌ಗಳನ್ನು ಪೂರೈಸಲಾಗುತ್ತಿದ್ದು, ಇದರಲ್ಲಿ 80 ಸ್ವಿಚ್ ಬಸ್‌ಗಳು ಈಗಾಗಲೇ ನಗರದಲ್ಲಿ ಕಾರ್ಯಾಚರಣೆಗೆ ಇಳಿದಿವೆ. ಇದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ JBM Auto ವತಿಯಿಂದ 90 ಇ - ಬಸ್‌ಗಳು ಕೂಡ ನಗರದ ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ.
ಬಿಎಂಟಿಸಿ ಅಧಿಕಾರಿಗಳೊಂದಿಗೆ ಎಲೆಕ್ಟ್ರಿಕ್ ಬಸ್‌ಗಳ ಪರಿಶೀಲನೆ ನಡೆಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, "ನಗರದ ವಾಹನ ದಟ್ಟಣೆ ತಗ್ಗಿಸಲು ಸಾರ್ವಜನಿಕ ಸಾರಿಗೆ ಅತ್ಯಂತ ಸುಗಮ, ಸರಳ ಮಾರ್ಗವಾಗಿದ್ದು, ಸೀಟ್‌ಗಳ ಲಭ್ಯತೆ ಹಾಗೂ ಸೂಕ್ತ ಸಮಯ ಪರಿಪಾಲನೆಯ ಗ್ಯಾರಂಟಿ ದೊರೆತರೆ ಇನ್ನೂ ಹೆಚ್ಚಿನ, ಪರಿಣಾಮಕಾರಿ ಪ್ರಭಾವ ಬೀರಬಲ್ಲದು, 1.2 ಕೋಟಿ ಜನಸಂಖ್ಯೆಗೆ ಬಿಎಂಟಿಸಿ ಯು ಪ್ರಸ್ತುತ 6,500 ಬಸ್‌ಗಳನ್ನು ಮಾತ್ರ ಹೊಂದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನಗರದ ಜನಸಂಖ್ಯೆಗೆ ತಕ್ಕಂತೆ ಪೂರೈಸಲು ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
PublicNext
13/09/2022 08:45 pm