ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹದಗೆಟ್ಟ ರಸ್ತೆಯಲ್ಲಿ ಬಾಳೆ,ತೆಂಗು ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ

ದಾಸರಹಳ್ಳಿ: ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಆಚಾರ್ಯ ಕಾಲೇಜು ರಸ್ತೆಯಿಂದ ತಮ್ಮೇನಹಳ್ಳಿಯ ಗಣಪತಿನಗರ ಮುಖ್ಯರಸ್ತೆ ಗುಂಡಿಮಯವಾಗಿದ್ದು, ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಬೇಸತ್ತ ಸ್ಥಳೀಯ ನಾಗರೀಕರು ಹದಗೆಟ್ಟ ರಸ್ತೆಯಲ್ಲಿ ಕೆಲ ನಿಮಿಷ ರಸ್ತೆತಡೆ ನೆಡೆಸಿ ರಸ್ತೆ ಗುಂಡಿಗಳಲ್ಲಿ ಬಾಳೆ, ತೆಂಗು ಹಾಗೂ ಭತ್ತದ ಪೈರುಗಳನ್ನ ನೆಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಮೊದಲು ಹಾಕಿದ್ದ ಕಳಪೆ ಕಾಂಕ್ರೀಟ್ ರಸ್ತೆ ದುಸ್ಥಿತಿ ತಲುಪಿದ್ದು ಕಂಬಿಗಳು ನರಬಲಿಗಾಗಿ ಬಾಯ್ತೆರೆದು ನಿಂತಿವೆ. ಎಡೆಬಿಡದೆ ಮಳೆ ಸುರಿಯುತ್ತಿರೋ ಕಾರಣ ಗುಂಡಿಗಳು ತುಂಬಿ ರಸ್ತೆ ಕಾಣದೆ ಹತ್ತಾರು ಜನ ಬಿದ್ದೆದ್ದ ಸನ್ನಿವೇಶಗಳು ಸಾಕಷ್ಟಿವೆ. ಪುರಸಭೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕ ಮಂಜುನಾಥ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿದ್ದ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ. ಎಂ. ಚಿಕ್ಕಣ್ಣ, ಕಮಿಟಿಯ ಪದಾಧಿಕಾರಿಗಳೊಂದಿಗೆ ಸ್ಥಳೀಯ ನಾಗರೀಕರು ಕೂಡ ಪ್ರತಿಭಟನೆಗೆ ಸಾಥ್ ನೀಡಿದರು..

ಸದರಿ ರಸ್ತೆ ದುರಾವಸ್ಥೆ ತಲುಪಿ ಐದಾರು ತಿಂಗಳಾದರೂ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಚಾರ್ಯ ಕಾಲೇಜು ರಸ್ತೆಯಿಂದ ಅಂದಾನಪ್ಪ ಬಡಾವಣೆವರೆಗೆ ರಸ್ತೆ ಹಾಳಾಗಿದ್ದು, ಶಾಲೆಗಳಿಗೆ ಓಡಾಡುವ ಮಕ್ಕಳ ಸ್ಥಿತಿ ಹೇಳತೀರದು. ನಾಗರಿಕರು ಪ್ರತಿಭಟನೆ ನಡೆಸಿ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು.

Edited By :
PublicNext

PublicNext

08/09/2022 03:52 pm

Cinque Terre

24.95 K

Cinque Terre

1

ಸಂಬಂಧಿತ ಸುದ್ದಿ