ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಳ್ಳುಪುರ ಕ್ರಾಸ್‌ನಿಂದ ಕಸವನಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕಳೆದ ಮೂರು ವರ್ಷಗಳಿಂದಲೂ ಡಾಂಬರೀಕರಣ ಕಾಣದೆ ಸಂಪೂರ್ಣ ಹದಗೆಟ್ಟಿದೆ. ಕೆಸರು, ಗುಂಡಿಗಳಿಂದ ಕೂಡಿರುವ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರಸ್ತೆಯಲ್ಲಿಯೇ ರಾಗಿ ಪೈರು ನಾಟಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಈ ಮುಖ್ಯರಸ್ತೆಯೂ ಕಸುವನಹಳ್ಳಿ, ಎಳ್ಳುಪುರ, ವರದನಹಳ್ಳಿ, ಪಂಡಿತಪುರ, ಜುಟ್ಟನಹಳ್ಳಿ, ತಿಂಡ್ಲು ಮುಂತಾದ ಗ್ರಾಮಗಳ ಮೂಲಕ ದೇವನಹಳ್ಳಿ ಸೇರಿದಂತೆ ಇಲ್ಲಿನ ಕೈಗಾರಿಕಾ ಪ್ರದೇಶದ ಕಂಪನಿಗಳು, ಫ್ಯಾಕ್ಟರಿಗಳು, ಹಾಗೂ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯ ಮುಖಾಂತರವೇ ಸಂಚರಿಸಬೇಕಿದೆ. ಮಳೆಯಿಂದಾಗಿ ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದೆ. ಕನಿಷ್ಟ ದ್ವಿಚಕ್ರ ವಾಹನ ಸವಾರರು, ಕಾಲ್ನಡಿಗೆ ಮಾಡುವವರು ಕೂಡ ಓಡಾಡಲು ಆಗದಷ್ಟು ಹದಗೆಟ್ಟಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಇದರಿಂದ ರೋಸಿ ಹೋದ ಗ್ರಾಮಸ್ಥರು ರಸ್ತೆಯಲ್ಲಿ ರಾಗಿ ಪೈರು ನಾಟಿ ಪ್ರತಿಭಟನೆ ನಡೆಸಿದರು.
PublicNext
04/09/2022 07:31 pm