ಬೆಂಗಳೂರು: ಸಿ.ವಿ.ರಾಮನ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ 30 ದಿನಗಳ ಕಾಲ ಬಿಹೆಚ್‌ಇಎಲ್ ಜಂಕ್ಷನ್‌ನಿಂದ ಯಶವಂತಪುರ ಸರ್ಕಲ್‌ವರೆಗೆ (ಪಶ್ಚಿಮ ದಿಕ್ಕು) ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ವಾಹನ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ಅದೇ ಮಾರ್ಗದಲ್ಲಿ ಸಂಚರಿಸುವಂತೆ ಕೋರಿದ್ದಾರೆ. ಮಲ್ಲೇಶ್ವರಂ 18ನೇ ಕ್ರಾಸ್ ಕಡೆಯಿಂದ ಬರುವ ವಾಹನಗಳು ಸದಾಶಿವ ನಗರ ಪೊಲೀಸ್ ಠಾಣೆ ಸಮೀಪದ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡತಿರುವು ಪಡೆದು ಮಲ್ಲೇಶ್ವರ ಮಾರ್ಗೋಸಾ ರಸ್ತೆಯ ಮೂಲಕ 15ನೇ ಕ್ರಾಸ್ ನಲ್ಲಿ ಬಲ ತಿರುವು ಪಡೆದು ಯಶವಂತಪುರ 8 ನೇ ಮುಖ್ಯ ರಸ್ತೆಯ ಮೂಲಕ ಯಶವಂತಪುರ ಸರ್ಕಲ್ ಕಡೆ ತೆರಳಬಹುದು.
ಸಿ.ವಿ.ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ಸದಾಶಿವ ನಗರ ಪೊಲೀಸ್ ಠಾಣೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕುವೆಂಪು ಸರ್ಕಲ್ ಬಿಇಎಲ್ ಸರ್ಕಲ್ ಮೂಲಕ ಸಾಗಬಹುದು.
Kshetra Samachara
17/08/2022 12:34 pm