ಬೆಂಗಳೂರು: ಪಾಲಿಕೆ ಪ್ರತಿ ತಿಂಗಳು ಲಾರಿಗಳಿಗೆ ಕಸ ತುಂಬಿ ನಗರದ ಹೊರವಲಯದ ವಿಲೇವಾರಿ ಜಾಗಕ್ಕೆ ತಲುಪಿಸಲು ಸರಿ ಸುಮಾರು 55 ಕೋಟಿ ರೂ. ವೆಚ್ಚ ಮಾಡುತ್ತದೆ. ಆದರೆ ಈಗ ಆ ಖರ್ಚನ್ನು ಕಡಿತಗೊಳಿಸಲು ಪಾಲಿಕೆ ಮೆಗಾ ಪ್ಲಾನ್ ಮಾಡಿದೆ.
ಮುಖ್ಯವಾಗಿ ಮಂಡೂರು, ಕನ್ನಹಳ್ಳಿಯಲ್ಲಿ ಸದ್ಯಕ್ಕೆ ಲ್ಯಾಂಡ್ ಫಿಲ್ಲಿಂಗ್ ಮಾದರಿಯಲ್ಲಿ ಕಸ ವಿಲೇವಾರಿ ನಡೆಯುತ್ತಿದೆ. ಎಲ್ಲ ವಲಯಗಳಿಂದಲೂ ಪ್ರತಿ ದಿನ ಇಲ್ಲಿಗೆ ಕಸ ತಂದು ವಿಲೇವಾರಿ ಮಾಡಲಾಗುತ್ತದೆ. ಪ್ರತಿ ವರ್ಷಕ್ಕೆ ಕಸ ಸಾಗಾಟಕ್ಕಾಗಿ ಬರೋಬ್ಬರಿ 660 ಕೋಟಿ ರೂ. ಖರ್ಚು ಮಾಡುತ್ತಿದೆ. ಇದನ್ನು ತಪ್ಪಿಸಲು ತ್ಯಾಜ್ಯ ಸಾಗಾಟ ಮಾಡುವ ಹೊಣೆಯನ್ನು ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳಿಂದ ಏಜೆನ್ಸಿಗಳು ಪಾಲಿಕೆ ಲ್ಯಾಂಡ್ ಫಿಲ್ಲಿಂಗ್ ಜಾಗಕ್ಕೆ ಕಸ ತಲುಪಿಸಬೇಕು. ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ ವಿಭಾಗ ಕಸ ಸಾಗಾಟಕ್ಕೆ ಅರ್ಹ ಏಜೆನ್ಸಿಗಳಿಗೆ ಪರವಾನಗಿ ನೀಡಲಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯಿಂದ ಲೈಸೆನ್ಸ್ ಪಡೆದ ಏಜೆನ್ಸಿಗಳು ಅಪಾರ್ಟೆಂಟ್, ಹೋಟೆಲ್, ಇಂಡಸ್ಟ್ರೀಸ್‌ಗಳಿಂದ ಕಸ ಸಂಗ್ರಹಿಸಬೇಕು. ಇದಕ್ಕೆ ಬಿಬಿಎಂಪಿಯೇ ದರ ನಿಗದಿ ಮಾಡಲಿದೆ. ಹೆಚ್ಚು ವಸೂಲಿ ಮಾಡಿದರೆ ಪಾಲಿಕೆಯಿಂದಲೇ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ತ್ಯಾಜ್ಯ ಸಾಗಾಟ ವೆಚ್ಚಕ್ಕೆ ಕೊಂಚ ಕಡಿವಾಣ ಬಿದ್ದಂತಾಗುತ್ತದೆ ಎಂದು ಹೇಳಿದ್ದಾರೆ.
Kshetra Samachara
15/08/2022 01:45 pm