ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟ್ರಾಫಿಕ್ ನಿರ್ವಹಣಾ ಕ್ರಮಗಳಿಂದ ಸದ್ಯ ಶೇ 40ರಷ್ಟು ಸುಗಮ ಸಂಚಾರ; ಪಾಲಿಕೆ ಮುಖ್ಯ ಆಯುಕ್ತ

ಬೆಂಗಳೂರು: ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ಜಂಕ್ಷನ್‌ಗಳಲ್ಲಿ ನಾವು ಸರಣಿ ವಿಸಿಟ್‌ಗಳನ್ನು ಮಾಡಿ ಟ್ರಾಫಿಕ್ ಜಾಮ್ ಕಡಿಮೆಗೊಳಿಸಲು ಬೇಕಾಗಿರುವ ಕ್ರಮ ಜಾರಿಗೆ ತಂದಿದ್ದೇವೆ. ಈ ಪರಿಣಾಮ ಕೆಲವು ಕಡೆ ಶೇ 40ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದ್ದು, ಸುಗಮ ಸಂಚಾರಕ್ಕೆ ಅವಕಾಶವಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ಸಮಸ್ಯೆಗೆ ಶೀಘ್ರದಲ್ಲೇ ಇತಿಶ್ರೀ ಹಾಡಲು ರಾಜ್ಯ ಸರ್ಕಾರವು ಹೊಸ ಕ್ರಮಗಳನ್ನು ಕೈಗೊಂಡಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಜೊತೆ ಸಮನ್ವಯ ಪರಿಶೀಲನಾ ಸಭೆ ನೆಡೆಯಿತು.

ದಿನದ 24 ಗಂಟೆಗಳಲ್ಲಿ ಎಷ್ಟು ಹೊತ್ತು ವಾಹನ ಸಂಚಾರ ದಟ್ಟಣೆ ಇರಲಿದೆ ಮತ್ತು ಬೇರೆ ಬೇರೆ ಸಮಯದಲ್ಲಿ ಯಾವ ರೀತಿಯಲ್ಲಿ ಇರಲಿದೆ ಎನ್ನುವುದರ ಕುರಿತು ಸಂಕ್ಷಿಪ್ತತವಾಗಿ ಗಮನಿಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗಿದೆ. ಇದರ ಹಿನ್ನಲೆಯಲ್ಲಿ ಸಭೆಯಲ್ಲಿ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆ ವಹಿಸಿದ್ದು, ಆಡಳಿತಗಾರ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್, ಜಲಮಂಡಳಿ ಅಧ್ಯಕ್ಷ ಜಯರಾಮ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಬಿಎಂಟಿಸಿ ನಿರ್ದೇಶಕ ಸೂರ್ಯ ಸೇನ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇಂದು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಿದ್ದೇವೆ. ಈಗಾಗಲೇ ಪೊಲೀಸ್ ಇಲಾಖೆ 3,750 ರಸ್ತೆ ಗುಂಡಿಗಳ ಮಾಹಿತಿ ನೀಡಿತ್ತು.‌ ಅದರಲ್ಲಿ ನಾವು 3000 ರಸ್ತೆ ಗುಂಡಿಗಳನ್ನು ಭರ್ತಿ ಮಾಡಿದ್ದೇವೆ ಎಂದರು.

ಶಾಶ್ವತ ಕಾಮಗಾರಿಗೆ ಕ್ರಮ:

ಉಳಿದ 750 ಗುಂಡಿಗಳನ್ನು ಸಹ ಈ ವಾರದಲ್ಲಿ ಮುಚ್ಚಲಾಗುತ್ತದೆ ಇನ್ನೂ ಸಂಚಾರಿ ಪೊಲೀಸರು ಒಟ್ಟು 54 ಕಡೆ ಮಳೆಬಿದ್ದಾಗ ನೀರು ತುಂಬುವ ಪ್ರದೇಶಗಳಲ್ಲಿ ತುರ್ತು ಕಾಮಾಗಾರಿ ನಡೆಸುವಂತೆ ಕೇಳಿದ್ದಾರೆ ಎಂದು ಹೇಳಿದ್ದರು. ಹೀಗಾಗಿ 54 ಸ್ಥಳಗಳಲ್ಲಿ ಒಟ್ಟು 53 ಸ್ಥಳಗಳಲ್ಲಿ ತಕ್ಷಣಕ್ಕೆ ಬೇಕಾಗಿರುವ ಕಾಮಾಗಾರಿ ನಡೆಸಲಾಗಿದೆ ಮುಂದುವರೆದು ಶಾಶ್ವತ ಕಾಮಾಗಾರಿಗಳನ್ನು ಸಹ ಮಾಡಲಾಗುವುದು ಎಂದು ಹೇಳಿದರು.

Edited By :
PublicNext

PublicNext

25/07/2022 04:48 pm

Cinque Terre

21.28 K

Cinque Terre

0

ಸಂಬಂಧಿತ ಸುದ್ದಿ